Konda Surekha: ಸಮಂತಾ- ನಾಗಚೈತನ್ಯ ಕ್ಷಮೆ ಕೋರಿದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ..! ಯಾಕೆ ಗೊತ್ತಾ..?

Share to all

ಹೈದರಾಬಾದ್:- ಅಶ್ಲೀಲ ಹೇಳಿಕೆ ನೀಡಿದ ವಿವಾದ ಜೋರಾಗುತ್ತಿದ್ದಂತೆ ತೆಲಂಗಾಣ ಸಚಿವೆ ಕೊಂಡ ಸುರೇಖಾ ಅವರು ಸಮಂತಾ ಬಳಿ ಕ್ಷಮೆಯಾಚಿಸಿದ್ದಾರೆ. ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ ಅವರು ನಟಿ ಸಮಂತಾ ಬಗ್ಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಕ್ಷಮೆ ಕೇಳಿದ್ದಾರೆ. ಅವರು ತಮ್ಮ ಉದ್ದೇಶವನ್ನು ಹೇಳಿ ಮಾತನ್ನು ಹಿಂಪಡೆದಿದ್ದಾರೆ.

ಎನ್​ ಕನ್ವೆಷನ್ ಹಾಲ್ ಉಳಿಸಿಕೊಳ್ಳಲು ಸಮಂತಾ ಅವರನ್ನು ಕಳುಹಿಸುವಂತೆ ನಾಗಾರ್ಜುನ ಬಳಿ ಕೆಟಿಆರ್ ಕೇಳಿದ್ದರು. ಆ ಬಳಿಕ ನಾಗಾರ್ಜುನ ಅವರು ಸಮಂತಾ ಬಳಿ ಹೋಗಿ ಈ ಡೀಲ್​ ಬಗ್ಗೆ ಮಾತನಾಡಿದ್ದರು. ಆದರೆ, ಇದಕ್ಕೆ ಒಪ್ಪದ ಸಮಂತಾ ಪತಿ ನಾಗ ಚೈತನ್ಯ ಇಂದ ವಿಚ್ಛೇದನ ಪಡೆದರು’ ಎಂದು ಸುರೇಖಾ ಹೇಳಿಕೆ ನೀಡಿದ್ದರು. ಜೊತೆಗೆ ನಟಿಯರ ಫೋನ್​ನ ಕೆಟಿ ರಾಮ್ ರಾವ್ ಟ್ಯಾಪ್ ಮಾಡಿ ನಂತರ ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು ಎಂದು ಕೂಡ ಹೇಳಿದ್ದರು. ಮಹಿಳೆಯರ ಬಗ್ಗೆ ಆ ನಾಯಕ ಹೊಂದಿರುವ ಕೀಳು ಮನೋಭಾವವನ್ನು ತೋರಿಸುವುದು ಮಾತ್ರ ನನ್ನ ಉದ್ದೇಶ ಆಗಿತ್ತೇ ಹೊರತು, ಸಮಂತಾ ಅವರ ಭಾವನೆಗೆ ದಕ್ಕೆ ತರೋದಲ್ಲ. ನೀನು ಸ್ವಶಕ್ತಿಯಿಂದ ಬೆಳೆದು ಬಂದ ಬಗ್ಗೆ ನನಗೆ ಅಭಿಮಾನ ಇದೆ. ಅದು ಆದರ್ಶವೂ ಹೌದು’ ಎಂದು ಕೊಂಡಾ ಸುರೇಖಾ ಟ್ವೀಟ್ ಮಾಡಿದ್ದಾರೆ.

ನನ್ನ ಕಾಮೆಂಟ್‌ಗಳಿಂದ ನಿಮಗೆ ಹಾಗೂ ನಿಮ್ಮ ಅಭಿಮಾನಿಗಳಿಗೆ ಬೇಸರ ಆಗಿದ್ದರೆ ನಾನು ನನ್ನ ಕಾಮೆಂಟ್‌ಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ. ಅನ್ಯಥಾ ಭಾವಿಸಬೇಡಿ’ ಎಂದು ಸುರೇಖಾ ಬರೆದುಕೊಂಡಿದ್ದಾರೆ.


Share to all

You May Also Like

More From Author