ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ಜಾಮೀನಿನ ದೊಡ್ಡ ಟೆನ್ಷನ್ ಆಗಿದೆ. ಪದೇ ಪದೇ ನ್ಯಾಯಾಂಗ ಬಂಧನ ಮುಂದುಡಿಕೆ, ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಿಂದ ದಾಸ ಜೈಲಲ್ಲಿ ಹೈರಾಣಾಗಿದ್ದಾರೆ. ಈಗ 17 ಆರೋಪಿಗಳ ಪೈಕಿ ಮೂರವರಿಗೆ ಜಾಮೀನು ಸಿಕ್ಕಿದ್ದು ದರ್ಶನ್ಗೆ ಸ್ವಲ್ಪ ನಿರಾಳ ತಂದಿದೆ. ತನಗೂ ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಇದರ ಬೆನ್ನಲ್ಲೇ ದರ್ಶನ್ಗೆ ಬೆನ್ನು ನೋವು ಹೆಚ್ಚಾಗಿದೆ. ಇದರಿಂದ ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿನಲ್ಲೇ ದರ್ಶನ್ ಆರೋಗ್ಯ ತಪಾಸಣೆ ನಡೆಸಿದ್ದಾರೆ.
ಜೈಲಿನ ಆವರಣದಲ್ಲಿ ಕಾಣಿಸಿಕೊಳ್ಳುವಾಗ ಫ್ಯಾನ್ಸ್ ಎದುರು ನಗುನಗುತ್ತಾ ಇರುವ ಅವರು ಒಳಗಿನಿಂದ ಸಾಕಷ್ಟು ನೋವು ಅನುಭವಿಸಿದ್ದಾರೆ ಎನ್ನಲಾಗಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್ನ ಆರೋಪಿ ದರ್ಶನ್ಗೆ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಬೆನ್ನು ನೋವು ಹೆಚ್ಚಾಗಿರುವುದರಿಂದ ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿನಲ್ಲೇ ದರ್ಶನ್ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಈಗಾಗಲೇ ಬೆನ್ನಿನ ಹಿಂಭಾಗದಲ್ಲಿ ಊತ ಬಂದಿರುವ ಸಾಧ್ಯತೆ ಇದೆ. ಅವರಿಗೆ ಸರ್ಜರಿ ಮಾಡಿಸಲೇಬೇಕಾದ ಅಗತ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ದರ್ಶನ್ಗೆ ಸ್ಕ್ಯಾನ್ ಮಾಡಿಸಲು ವೈದ್ಯರು ಸೂಚನೆ ನೀಡಿದ್ದಾರೆ.
ಆದರೆ, ದರ್ಶನ್ ಅವರು ಸ್ಕ್ಯಾನ್ ಮಾಡಿಸೋದಕ್ಕೆ ರೆಡಿ ಇಲ್ಲ. ‘ನಾನು ಬೆಂಗಳೂರಿಗೆ ಹೋದ್ಮೇಲೆ ಸ್ಕ್ಯಾನ್ ಮಾಡಿಸ್ತೀನಿ. ಸದ್ಯಕ್ಕೆ ನೋವು ನಿವಾರಕ ಮಾತ್ರೆ ಕೊಡಿ ಸಾಕು’ ಎಂದು ದರ್ಶನ್ ಕೋರಿಕೊಂಡಿದ್ದಾರೆ ಎಂದು ವರದಿ ಆಗಿದೆ.