ಕಿಚ್ಚನ ಮೊದಲ ಪಂಚಾಯ್ತಿಯಲ್ಲಿ ಲಾಯರ್ ಜಗದೀಶ್ಗೆ ಕ್ಲಾಸ್..!? ಯಾವ ವಿಷಯಕ್ಕೆ ಗೊತ್ತಾ..?

Share to all

ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ 17 ಸ್ಪರ್ಧಿಗಳಿದ್ದಾರೆ. ಈ ಪೈಕಿ ಈ ವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಭರ್ಜರಿ ದ್ವೇಷ ಹುಟ್ಟಿಕೊಂಡಿತ್ತು. ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಂಡಿದ್ದರು. ಸೂಪರ್ ಸಟರ್ಡೆ ವಿಥ್ ಸುದೀಪ್ ಎಪಿಸೋಡ್​ಗೆ ಕರ್ನಾಟಕದ ಜನತೆ ಕಾದು ಕುಳಿತಿದ್ದು, ಮೊದಲ ಪಂಚಾಯಿತಿಯಲ್ಲಿ ಏನೆಲ್ಲ ಆಗುತ್ತೆ ಎಂಬುದು ಕುತೂಹಲ ಕೆರಳಿದೆ. ಮೊದಲ ವಾರ ಬಿಗ್ ಬಾಸ್ ಮನೆ ಹೆಚ್ಚು ಜಗಳಗಳಿಂದಲೇ ಕೂಡಿತ್ತು. ಅದರಲ್ಲೂ ಲಾಯರ್ ಜಗದೀಶ್ ಆಡಿದ ಮಾತುಗಳು ಅನೇಕ ಸ್ಪರ್ಧಿಗಳಿಗೆ ನೋವು ತರಿಸಿದ್ದು ಈ ಕುರಿತು ಕಿಚ್ಚ ಏನು ಹೇಳುತ್ತಾರೆ ನೋಡಬೇಕಿದೆ.

ನರಕ ಮತ್ತು ಸ್ವರ್ಗ​’ ಎಂಬ ಕಾನ್ಸೆಪ್ಟ್​​ ಮೂಲಕ ಶುಭಾರಂಭ ಮಾಡಿರುವ ಕಾರ್ಯಕ್ರಮದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ವಾದ – ವಾಗ್ವಾದಗಳು ಜರುಗಿವೆ. ಕಳೆದ ವಾರಾಂತ್ಯ ನಗುಮೊಗದಲ್ಲಿ ಮನೆಯೊಳಗೆ ಬಲಿಗಾಲಿಟ್ಟಿರುವ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ಜೋರಾಗಿಯೇ ನಡೆದಿದೆ. ಇದೀಗ ಎಲಿಮಿನೇಶನ್​ಗೆ ಕ್ಷಣಗಣನೆ ಶುರುವಾಗಿದೆ.

ಇಂದಿನ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಅವರು ಲಾಯರ್ ಜಗದೀಶ್ ಅವರಿಗೆ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಸ್ಪರ್ಧಿಗಳ ಜೊತೆಗಿನ ಜಗಳ ಒಂದುಕಡೆಯಾದರೆ ಮತ್ತೊಂದೆಡೆ ಇವರು ಬಿಗ್ ಬಾಸ್​ಗೆನೇ ಧಮ್ಕಿ ಹಾಕಿದ್ದರು. ‘ಈ ಪ್ರೊಗ್ರಾಂ ಹಾಳು ಮಾಡಿಲ್ಲ ನನ್ನ ಹೆಸರು ಬೇರಿ ಇಡಿ. ಯಾವನೂ ಕಾಲಿಡಬಾರದು ಇಲ್ಲಿಗೆ. ಬಿಗ್ ಬಾಸ್ ನಿಮ್ಮನ್ನು ಎಕ್ಸ್​ಪೋಸ್ ಮಾಡುತ್ತೇನೆ. ನಮ್ಮನ್ನ ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸ್ತೀರಾ?’ ಎಂದು ಜಗದೀಶ್ ನಾಲಿಗೆ ಹರಿಬಿಟ್ಟಿದ್ದರು. ಮುಂದಿನ ದಿನ ಈ ಮಾತಿಗೆ ಕ್ಷಮೆ ಕೇಳಿದ್ದರೂ ಸುದೀಪ್ ಈ ವಿಚಾರವನ್ನು ಎತ್ತುವುದು ಖಚಿತ.

ನಾನು ಎಲ್ಲಾ ನೋಡಿದ್ದೇನೆ ಎಂದ ಜಗದೀಶ್​, ಹೆಣ್ಮಕ್ಕಳ ಒಳ ಉಡುಪಿನ ಬಗ್ಗೆ ಬ್ಯಾಡ್​ ಕಮೆಂಟ್ ಮಾಡಿದ್ದು, ನನ್ನ ಹೆಂಡತಿ ಕೂಡ ಹಾಕೋದು ಅದನ್ನೇ ಎಂದು ಅಸಭ್ಯವಾಗಿ ಮಾತಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದ ಹೆಣ್ಮುಕ್ಕಳಿಗೆ ಲಾಯರ್ ಜಗದೀಶ್ ಮಾತಿನಿಂದ ಮುಜುಗರವಾಗಿದೆ. ಹೆಣ್ಮುಕ್ಕಳ ಬಗ್ಗೆ ಈ ರೀತಿ ಮಾತಾಡೋದು ಎಷ್ಟು ಸರಿ ಎಂದು ಜನ ಕೂಡ ಕೇಳ್ತಿದ್ದಾರೆ. ಮಿತಿ ಮೀರಿ ಮಾತಾಡಿದ್ದಾರೆ. ಹೆಣ್ಮಕ್ಕಳ ವೈಯಕ್ತಿಕ ವಿಚಾರ ಎಂದು ಶಿಕ್ಷೆ ನೀಡಿ ಎಂದು ಭವ್ಯ ಹೇಳಿದ್ದು, ಈ ಲಾಯರ್ ಮುಂದೆ ಓಡಾಡಲು ಭಯವಾಗ್ತಿದೆ ಎಂದು ಐಶ್ವರ್ಯಾ ಕೂಡ ಹೇಳಿದ್ದಾರೆ. ಇನ್ನು ಈ ವಾರ ಕಿಚ್ಚನ ಕಥೆಯಲ್ಲಿ ಜಗದೀಶ್ ಅವರನ್ನು ತರಾಟೆಗೆ ತೆಗೆದುಕೊಳ್ಳಿ ಎಂದು ನೆಟ್ಟಿಗರು ಹೇಳ್ತಿದ್ದಾರೆ.


Share to all

You May Also Like

More From Author