ಮೊದಲ ವಾರವೇ ಬಿಗ್‌ ಬಾಸ್‌ ಶೋ ನಿಂದ ಹೊರಬಂದ DBOSS ಅಭಿಮಾನಿ: ಯಮುನಾಗೆ ಮಾತೇ ಮುಳುವಾಯ್ತಾ!?

Share to all

ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ಮೊದಲ ವಾರದ ಎಲಿಮಿನೇಷನ್​ ಪ್ರಕ್ರಿಯೆ ನಡೆದಿದ್ದು, D BOSS ಅಭಿಮಾನಿ ಯಮುನಾ ಶ್ರೀನಿಧಿ ಅವರು ಒಂದೇ ವಾರದಲ್ಲಿ ಆಟ ಮುಗಿಸಿದ್ದಾರೆ.

ನಟಿ ಯಮುನಾ ಶ್ರೀನಿಧಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಆಗಿದ್ದಾರೆ. ಫಸ್ಟ್​ ವೀಕ್​ನಲ್ಲಿಯೇ ಅವರು ಎಲಿಮಿನೇಟ್​ ಆಗುತ್ತಾರೆ ಎಂದು ಅವರ ಅಭಿಮಾನಿಗಳು ಊಹಿಸಿರಲಿಲ್ಲ. ಟ್ರೋಫಿ ಗೆಲ್ಲಬೇಕು ಎಂಬ ಆಸೆ ಇಟ್ಟುಕೊಂಡು ಬಂದಿದ್ದ ಯಮುನಾ ಶ್ರೀನಿಧಿ ಅವರಿಗೆ ನಿರಾಸೆ ಆಗಿದೆ.

ಸೂಪರ್ ಸಂಡೇ ವಿತ್ ಕಿಚ್ಚ ಎಪಿಸೋಡ್​ನಲ್ಲಿ ಖುಷಿ ಖುಷಿಯಾಗಿದ್ದ ಯಮುನಾಗೆ ಎಲಿಮಿನೇಷನ್​ ಬಿಗ್ ಶಾಕ್ ನೀಡಿತ್ತು. ಕೊನೆಯಲ್ಲಿ ಚೈತ್ರಾ, ಜಗದೀಶ್ ಸೇಫ್​ ಆಗ್ತಿದ್ದಂತೆ ಯಮುನಾ ದೊಡ್ಮನೆಯಿಂದ ಔಟ್ ಆದ್ರು. ಒಂದೇ ವಾರಕ್ಕೆ ಜರ್ನಿ ಮುಗಿಸಿದ ಬೇಸರ ಯಮುನಾ ಅವರ ಮುಖದಲ್ಲೂ ಇತ್ತು.

ಒಂದೇ ವಾರದಕ್ಕೆ ನಟಿ ಯಮುನಾ ಬಿಗ್ ಬಾಸ್​ ಮನೆಯಿಂದ ಹೊರಗೆ ಬಂದಿದ್ದಾರೆ. ಹೆಚ್ಚು ಆ್ಯಕ್ಟಿವ್ ಆಗಿರದ ಕಾರಣ, ವೋಟಿಂಗ್ ಕಡಿಮೆ ಬಂದಿರಬಹುದು ಎನ್ನಲಾಗ್ತಿದೆ. ಎಲಿಮಿನೇಷನ್ ಆದ ಬಳಿಕ ಯಮುನಾ ದೊಡ್ಮನೆಯಿಂದ ಹೊರಗೆ ಬಂದು ಕಿಚ್ಚನ ಮುಂದೆ ಎಲಿಮಿನೇಷನ್ ವಿಚಾರಕ್ಕೆ ಗರಂ ಆಗಿದ್ದಾರೆ.

ಎಲಿಮಿನೇಟ್ ಆದ ಸಿಟ್ಟಾಲ್ಲಿ ಒಂದೇ ವಾರಕ್ಕೆ ಹೊರಗೆ ಬರುವ ಕಳಪೆ ಸ್ಪರ್ಧಿ ನಾನಲ್ಲ ಎಂದಿದ್ದಾರೆ. ನಟಿ ಮಾತು ಕೇಳಿ ನೆಟ್ಟಿಗರು ಬಿಗ್ ಬಾಸ್ ಅಥವಾ ಪ್ರೇಕ್ಷಕರು ಯಾರ ನಿರ್ಧಾರ ಸರಿಯಲ್ಲ ಎಂದು ಹೇಳಿ ಅಂತ ಪ್ರಶ್ನೆ ಮಾಡ್ತಿದ್ದಾರೆ. ಮುಂದಿನ ವಾರ ಎಲಿಮಿನೇಟ್ ಆಗೋದು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಯಮುನಾ, ಐಶ್ವರ್ಯಾ ಅಥವಾ ಮೋಕ್ಷಿತಾ ಎಂದಿದ್ದಾರೆ.


Share to all

You May Also Like

More From Author