ಅಣ್ಣಂಗೆ ಲವ್‌ ಆಗಿದೆ.. ! ಹಂಸಗೆ I Love You ಎಂದ ಜಗದೀಶ್‌?! ಕ್ಯಾಪ್ಟನ್ ಮೇಲೆ ಲಾಯರ್‌ ಕಣ್ಣು

Share to all

ಬಿಗ್ ಬಾಸ್ ಸೀಸನ್ 11 ವೀಕ್ಷಕರಿಗೆ ಸಖತ್ ಮನರಂಜನೆ ಕೊಡುತ್ತಿದೆ. ಅದು ಮುಖ್ಯ ಕಾರಣ ಲಾಯರ್ ಜಗದೀಶ್. ಮೊದಲನೇ ವಾರ, ಬರೀ ಆವಾಜ್, ಕಿರಿಕ್, ಜಗಳ ತೆಗೆದಿದ್ದ ಜಗದೀಶ್ ಈ ವಾರ ಲವ್ ಮೂಡ್ ಗೆ ಜಾರಿದ್ದಾರೆ.

I Love you ಹಂಸ್, ಎಂದು ಕ್ಯಾಪ್ಟನ್ ಹಿಂದೆ ಬಿದ್ದಿದ್ದಾರೆ. ನಟಿ ಹಂಸಾ ಮನೆಯ ನಾಯಕತ್ವ ವಹಿಸಿದ್ದು, ಇದೀಗ ಲಾಯರ್​ ಜಗದೀಶ್ ಅವರ ಕಾಲೆಳೆಯಲು ಶುರು ಮಾಡಿದ್ದಾರೆ. ಅಷ್ಟೇ ಏಕೆ ‘ಐ ಲವ್​ ಯೂ ಕ್ಯಾಪ್ಟನ್’​ ಎಂದು ಹೇಳಿದ್ದಾರೆ.

ಲಾಯರ್​ ಜಗದೀಶ್​ ಕ್ಯಾಪ್ಟನ್​ ಹಂಸಾ ಅವರಿಗೆ ಕೋಪಿಸಿಕೊಳ್ಳುವಂತೆ ಮಾಡಿದ್ದಾರೆ. ಈ ವೇಳೆ ತಮಾಷೆಯ ಜೊತೆಗೆ ಕಾಲೆಳೆಯುತ್ತಿದ್ದಾರೆ. ಸಿಕ್ಕ ಸಿಕ್ಕ ವಸ್ತುಗಳನ್ನು ತಂದು ಕೊಡುವಂತೆ ಆಗ್ರಹಿಸಿದ್ದಾರೆ. ಅಷ್ಟು ಮಾತ್ರವಲ್ಲ ನನಗೆ ಚಿಕನ್​ ಮಂಚೂರಿ ಬೇಕು ಎಂದು ಜಗದೀಶ್​ರವರು ಹಂಸಾ ಬಳಿ ಕೇಳಿದ್ದಾರೆ. ತಂದಿಲ್ಲ ಅಂದ್ರೆ ನಿನ್ನನ್ನೇ ಮಾಡ್ತೀನಿ ನೋಡ್ತಿರು ಎಂದಿದ್ದಾರೆ.

ಇದಲ್ಲದೆ ಹಂಸಾ ಅವರಿಗೆ ಉಪೇಂದ್ರ ನಟನೆಯ ಗೋಕರ್ಣ ಸಿನಿಮಾದ ‘ಮಾರಿ ಕಣ್ಣು ಹೋರಿ ಮ್ಯಾಲೆ’ ಹಾಡು ಹಾಡಿದ್ದಾರೆ. ನನ್ನ ಕಣ್ಣು ಅವಳ ಮೇಲೆ ಅವಳ ಕಣ್ಣು ನನ್ನ ಮೇಲೆ ಎಂದಿದ್ದಾರೆ. ಇದಲ್ಲದೆ, ಹಂಸಾ ಅವರನ್ನು ಹಂಸ್​ ಎಂದು ಕರೆದಿದ್ದಾರೆ.

ಹಂಸಾಗೆ ನಾನು ನಿಮ್ಮ ಫ್ಯಾನ್​​ ಎಂದು ಜಗದೀಶ್ ಹೇಳಿದ್ದಾರೆ. ಮುಂಗಾರು ಮಳೆ ಸಿನಿಮಾದಂತೆ ಹಂಸಾರವರು ಜಗದೀಶ್​ ಎದೆ ಮೇಲೆ ಕಾಲಿಟ್ಟು ನಡೆದಿದ್ದಾರೆ​​.


Share to all

You May Also Like

More From Author