ನನಗೆ ಆ ವ್ಯಕ್ತಿಗೆ ಹೇಳಿ ಹೇಳಿ ಸಾಕಾಗಿದೆ. ಯವಾಗಲೂ ಚಡ್ಡಿ, ಪ್ಯಾಂಟ್ ಬಿಚ್ಚೋ ಬಗ್ಗೆನೆ ಮಾತಾಡ್ತರೆ. ಎಂದು ಹೇಳುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ವಿರುದ್ಧ ಹಂಸಾ ಬೇಸರ ಹೊರ ಹಾಕಿದ್ದಾರೆ. ಎಸ್, ಎಲ್ಲರಿಗೂ ತಿಳಿದಿರೋ ಹಾಗೆ ಬಿಗ್ ಬಾಸ್ ಸೀಸನ್ 11 ವೀಕ್ಷಕರಿಗೆ ಸಖತ್ ಮನರಂಜನೆ ಕೊಡುತ್ತಿದೆ. ಅದರಲ್ಲಿಯೂ ಲಾಯರ್ ಜಗದೀಶ್ ಕಾಟಕ್ಕೆ ಮನೆ ಮಂದಿ ಸುಸ್ತಾದರೆ, ಶೋ ವೀಕ್ಷಿಸುತ್ತಿರುವ ವೀಕ್ಷಕರಿಗೆ ಸಖತ್ ಮನರಂಜನೆ ಕೊಡುತ್ತಿದೆ.
ಅದರಂತೆ ಬಿಗ್ ಬಾಸ್ ಮನೆಯಲ್ಲಿ ಮೂಲ ನಿಯಮ ಒಂದು ಉಲ್ಲಂಘನೆಯಾಗಿ ಮನೆಮಂದಿಯೆಲ್ಲಾ ಶಿಕ್ಷೆ ಅನುಭವಿಸುವಂತಾಗಿದೆ. ಬ್ಲೈಂಡ್ಸ್ ಡೌನ್ ಆದಾಗ ಅದರಲ್ಲಿ ಇಣುಕಿ ಯಾರೂ ನೋಡಬಾರದು ಎಂಬುದು ಬಿಗ್ ಬಾಸ್ನ ಮೂಲ ನಿಯಮ. ಈ ನಿಯಮಗಳನ್ನು ಮುರಿದರೆ ಬಿಗ್ ಬಾಸ್ ಎಂದಿಗೂ ಸಹಿಸೋದಿಲ್ಲ. ಈಗ ದೊಡ್ಮನೆಯಲ್ಲಿ ಈ ಘಟನೆ ನಡೆದು ಹೋಗಿದೆ. ಮಾನಸಾ, ಶಿಶಿರ್ ಹಾಗೂ ಮೋಕ್ಷಿತಾ ಅವರು ಬ್ಲೈಂಡ್ಸ್ ಡೌನ್ ಆದಾಗ ಇಣುಕಿ ನೋಡಿದ್ದರು. ಅದೇ ರೀತಿ ಜಗದೀಶ್ ಅವರು ಬ್ಲೈಂಡ್ಸ್ ಒಳಗೆ ಹೋಗಿ ಡ್ರೆಸ್ ಚೇಂಜ್ ಮಾಡಿಕೊಂಡಿದ್ದಾರೆ.
ಬಟ್ಟೆ ಚೇಂಜ್ ಮಾಡುವ ಕಾರಣಕ್ಕೆ ನಾನು ಬ್ಲೈಂಡ್ಸ್ ಒಳಗೆ ಹೋಗಿದ್ದೆ. ನಾನು ಅಲ್ಲಿ ಏನನ್ನೂ ನೋಡಿಲ್ಲ’ ಎಂದು ಜಗದೀಶ್ ಅವರು ಹೇಳಿದರು. ‘ಬೇರೆಯವರಿಗೆ ತೊಂದರೆ ಕೊಡೋದು ಬೇಡ. ನಿಮಗೆ ನೀವು ಏನು ಬೇಕಾದರೂ ಮಾಡಿಕೊಳ್ಳಿ. ಬೇಕಿದ್ರೆ ಬಿಗ್ ಬಾಸ್ಗೆ ಹೇಳಿ ಚಾಕು ಬೇಕಿದ್ದರೂ ಹಾಕಿಕೊಳ್ಳಿ’ ಎಂದು ಉಗ್ರಂ ಮಂಜು ಆಕ್ರೋಶ ಹೊರಹಾಕಿದರು. ಆ ಬಳಿಕ ಮಾತನಾಡಿದ ಹಂಸ, ‘ನಾನು ಎಷ್ಟು ಅಂತ ಹೇಳೋದು? ಕೇಳಿದ್ರೆ ಇಲ್ಲೇ ಪ್ಯಾಂಟ್ ಬಿಚ್ಚಲಾ, ಚೆಡ್ಡಿ ಬಿಚ್ಚಲಾ’ ಎಂದು ಕೇಳ್ತಾರೆ ಎದು ಅಸಮಾಧಾನ ಹೊರಹಾಕಿದ್ದಾರೆ.