ಬಿಗ್ ಬಾಸ್ ಸೀಸನ್11 ಮೂರನೇ ವಾರಕ್ಕೆ ಕಾಲಿಟ್ಟಿದೆ. ಮನೆಯಲ್ಲಿ ಪ್ರತಿ ಸದಸ್ಯರ ಕೂಗಾಟ ಜೋರಾಗಿದೆ. ಅದರಲ್ಲೂ ಮಾನಸ ಅವರ ಬೀಪ್ ಪದಕ್ಕೆ ನೆಟ್ಟಿಗರು ಕೂಡ ಆಕ್ರೋಶ ಹೊರ ಹಾಕುತ್ತಿದ್ದಾರೆ ನಿನ್ನೆಯ ಎಪಿಸೋಡ್‌ನಲ್ಲಿ ಮಾನಸ ಬಳಸಿರುವ ಪದ ಮೀತಿ ಮೀರಿದಂತಿದೆ. ಎಪಿಸೋಡ್‌ನಲ್ಲಿ ಮಾಸನ ಮತ್ತು ಜಗದೀಶ್ ನಡುವೆ ಜಗಳ ಶುರುವಾಗುತ್ತದೆ, ಆಗ ಮಾನಸ ಚಪ್ಪಲಿ ಹಾಗೆ ಹೀಗೆ ಎಂದು ಕೆಟ್ಟ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಮಾಸನ ಮಾತನಾಡಿರುವ ರೀತಿ ಸರಿಯಾಗಿಲ್ಲ ಗಂಡಸರ ಜೊತೆ ಹೀಗೆ ಮಾತನಾಡಬಾರದು ಎಂದು ಜಗದೀಶ್ ಕ್ಯಾಮೆರಾ ಮುಂದೆ ಮಾತನಾಡಿದ್ದರು. ಅಷ್ಟೇ ಅಲ್ಲ ಮಹಿಳೆಗೆ ಮಾತ್ರ ಗೌರವ ಅಲ್ಲ ಗಂಡಸರಿಗೂ ಇರುತ್ತೆ ಎಂದು ಹೇಳಿದ್ದಾರೆ.
ನಿನ್ನೆಯ ಎಪಿಸೋಡ್‌ನಲ್ಲಿ ಹೆಣ್ಣು ಮಕ್ಕಳ ಬಗ್ಗೆ ಈ ರೀತಿ ಮಾತಾಡ್ಬೇಡ ಎಂದು ಗೋಲ್ಡ್ ಸುರೇಶ ಹೇಳಿದ್ದರು. ಏ ನಾನ್ ಏನಾದ್ರು ಮಾತಾಡ್ತಿನಿ ನನ್ನ ಇಷ್ಟ ಎಂದು ಜಗದೀಶ್ ಹೇಳಿದ್ರು. ಬಳಿಕ ಚೈತ್ರಾ ಆ ಪದ ಬಳಸಿದ್ರಾ ಎಂದು ಸಿಡಿದೆದ್ದಿದ್ದಾರೆ. ಬಳಿಕ ಮಾನಸ ಸೀರೆ ಕೊಡ್ತೀನಿ ಉಡ್ಕೋ ಎಂದಿದ್ದಾರೆ. ಸೀರೆ ಯಾಕೆ ಕೊಡ್ತೀಯಾ, ಹೆಂಗಸಾಗೋ ಯೋಗ್ಯತೆ ಅವನಿಗೆ ಇಲ್ಲ ಎಂದು ಹೇಳಿದ್ದಾರೆ.
ಬಿಗ್ ಬಾಸ್ ಸೀಸನ್ 10ರಲ್ಲಿ ಹಾಸ್ಯ ನಟ ತುಕಾಲಿ ಸಂತೋಷ್ ಸ್ಪರ್ಧಿಸಿ ಫಿನಾಲೆ ಲಿಸ್ಟ್ ಹಂತ ತಲುಪಿದ್ದರು. ಈಗ ಬಿಗ್ ಬಾಸ್ ಸೀಸನ್ 11ರಲ್ಲಿ ತುಕಾಲಿ ಸಂತೋಷ್ ಪತ್ನಿ ಮಾನಸ ಸ್ಪರ್ಧಿಸುತ್ತಿದ್ದಾರೆ. ಗಂಡ-ಹೆಂಡತಿಗೆ ವರ್ಷ ವರ್ಷವೂ ಕೆಲಸ ಕೊಡುವುದಾಗಿ ಕಲರ್ಸ್ ಕನ್ನಡ ಕಾಂಟ್ರಾಕ್ಟ್ ಕೊಟ್ಟಿದ್ದಾರಾ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಓಪನಿಂಗ್ ವಾರದಿಂದಲೂ ಬರ್ಲಾ ಹೋಗ್ಲಾ ಎಂದು ಮಾತನಾಡುವುದನ್ನು ಖುಷಿಯಿಂದ ನೋಡುತ್ತಿದ್ದರು ಆದರೆ ಈಗ ಆ ಮಾತುಗಳಿಂದ ಕಿರಿಕಿರಿ ಉಂಟಾಗುತ್ತಿದೆ ಅಂತಿದ್ದಾರೆ ಜನರು.