ಬಿಗ್ ಬಾಸ್ ಕನ್ನಡ ಸೀಸನ್ 11 ಮೂರನೇ ವಾರದ ಆಟ ಮುಂದುವರಿಸಿದೆ. ಜಗಳ, ಕಿರುಚಾಟ, ವಾದ ವಿವಾದಗಳು ಲೆಕ್ಕಕ್ಕಿಂತ ಕೊಂಚ ಹೆಚ್ಚೇ ಎನ್ನಬಹುದು. ಈ ವಾರದ ಬಿಗ್‌ಬಾಸ್ ಕನ್ನಡ ಸೀಸನ್ 11ರ ವಾರದ ಪಂಚಾಯಿತಿಯ ಶನಿವಾರದ ಎಪಿಸೋಡ್ ಬಹಳ ಗರಂ ಆಗಿತ್ತು. ಮನೆಯಲ್ಲಿ ಭಾರಿ ಜಗಳ, ಇಬ್ಬರು ಸ್ಪರ್ಧಿಗಳು ಹೊರಗೆ ಹೋಗಿರುವುದು, ಸ್ಪರ್ಧಿಗಳು ವರ್ತಿಸಿದ ರೀತಿ, ಮಾತನಾಡಿದ ರೀತಿ ಹಲವು ವಿಷಯಗಳು ಚರ್ಚಿಸಿದರು. ಇದರ ಜೊತೆಗೆ ಬಿಗ್‌ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರ ಮಾತಿಗೆ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೌದು ಜಗದೀಶ್ ಮತ್ತು ಚೈತ್ರಾ ಕುಂದಾಪುರ ನಡುವೆ ಹಲವು ಬಾರಿ ಜಗಳ ಆಗಿರೋದನ್ನು ಬಿಗ್‌ಬಾಸ್ ವೀಕ್ಷಕರು ಗಮನಿಸಿದ್ದಾರೆ. ಈ ಸಮಯದಲ್ಲಿ ಚೈತ್ರಾ ಕುಂದಾಪುರ ಆಡಿದ ಮಾತುಗಳಿಗೆ ಸುದೀಪ್ ಬೇಸರದ ಜೊತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆಗೊಳಿಸಿದೆ.
ಹೆಣ್ಮಕ್ಕಳು, ಹೆಣ್ಣು ಮಕ್ಕಳ ಬಗ್ಗೆ ಹಾಗೆಲ್ಲಾ ಮಾತನಾಡಬೇಡಿ ಎಂದು ಹೇಳಿದ್ದೀರಿ ಅಲ್ಲವಾ ಮೇಡಮ್ ಎಂದು ಚೈತ್ರಾ ಅವರನ್ನು ಸುದೀಪ್ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಹೌದು ಎಂಬಂತೆ ಚೈತ್ರಾ ಕುಂದಾಪುರ ತಲೆಯಾಡಿಸುತ್ತಾರೆ. ಮುಂದುವರಿದ ಮಾತನಾಡುವ ಸುದೀಪ್, ನಿಮ್ಮ ಮಾತನ್ನು ನಾನು ಸಹ ಗೌರವಿಸುತ್ತೇನೆ. ಹಾಗೆ ಪುರುಷರನ್ನು ಸಹ ಮಹಿಳೆಯರು ಗೌರವಿಸಬೇಕು ಅಲ್ವೇ? ಓಕೆ, ಹಾಗಾದ್ರೆ, ನೀವು ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂತ ಎಂಬ ಮಾತನ್ನು ನೀವು ಹೇಳುತ್ತೀರಿ ಅಲ್ಲವೆ? ಈಗ ನೀವು ಅವರ ತಾಯಿಗೆ ತಾನೇ ಬೈದಿದ್ದು ಅಲ್ಲವಾ ಎಂದು ಸುದೀಪ್ ಪ್ರಶ್ನೆ ಮಾಡುತ್ತಾರೆ.
ಇದಕ್ಕೆ ಮತ್ತೆ ಚೈತ್ರಾ ತಲೆಯಾಡಿಸುತ್ತಾರೆ. ಇತ್ತ ಹೊರಗೆ ಕುಳಿತಿದ್ದ ವೀಕ್ಷಕರು ಜೋರಾಗಿ ಚಪ್ಪಾಳೆ ತಟ್ಟುತ್ತಾರೆ. ಒಬ್ಬ ಅಪ್ಪನಿಗೆ ಹುಟ್ಟಿದ್ದೀಯಾ ಎಂದು ಯಾರೂ ಪುರುಷರಿಗೆ ಬೈಯ್ಯತ್ತಿಲ್ಲ. ಒಬ್ಬ ಅಪ್ಪಂಗೆ ಹುಟ್ಟಿದ್ರೆ ಅವರ ತಾಯಿಗೆ ಬೈದಂತೆ ಆಗುತ್ತದೆ. ಈ ರೀತಿ ಬೈಯ್ಯುವ ನೀವು ಹೆಣ್ಣು ಮಕ್ಕಳಿಗೆ ಗೌರವ ಕೊಡಿ ಎಂದು ಕೇಳುತ್ತೀರಿ. ಇದು ಹೇಗೆ ಸಾಧ್ಯ ಎಂದು ಚೈತ್ರಾ ಕುಂದಾಪುರ ಅವರನ್ನು ಸುದೀಪ್ ಪ್ರಶ್ನೆ ಮಾಡಿದ್ದಾರೆ.