Bigg Boss Kannada 11: ಬಿಗ್ಬಾಸ್ ಸೌಧದಲ್ಲಿ ಪಾಲಿಟಿಕ್ಸ್: ವಿಕ್ರಂ ಪರ ಚೈತ್ರಾ ಕ್ಯಾಂಪೇನ್!

Share to all

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ನಿನ್ನೆ ಬಿಗ್​ಬಾಸ್ ಮನೆಯಿಂದ ಒಬ್ಬರು ಸ್ಪರ್ಧಿಗಳು ಆಚೆ ಬಂದಿದ್ದಾರೆ. ಲಾಯರ್​ ಜಗದೀಶ್​ ಹಾಗೂ ರಂಜಿತ್​ ಬಿಗ್​ಬಾಸ್​ ಮನೆಯಿಂದ ನೇರವಾಗಿ ಮುಖ್ಯ ದ್ವಾರದಿಂದ ಹೊರ ಬಂದಿದ್ದಾರೆ. ಇದರ ಬೆನ್ನಲ್ಲೇ ದೊಡ್ಮನೆ ಈಗ ರಾಜಕೀಯ ರಣರಂಗವಾಗಿ ಬದಲಾಗಿದೆ.

ರಾಜಕೀಯದಾಟದಲ್ಲಿ ಯಾರೂ ಗೆಲ್ತಾರೆ ಎಂಬುದೇ ಬಹಳ‌ಮುಖ್ಯ. ಎರಡು ರಾಜಕೀಯ ಪಕ್ಷಗಳಾಗಿ ವಿಂಗಡಿಸಿರುವ ಬಿಗ್ ಬಾಸ್ ಒಂದಕ್ಕೆ ಪ್ರಾಮಾಣಿಕ ‘ಸಮರ್ಥರ ನ್ಯಾಯವಾದಿ ಪಕ್ಷ’ ಹಾಗೂ ಎರಡನೆಯದು ‘ಧರ್ಮ ಸೇನಾ ಪಕ್ಷ’ ಎಂದು ಹೆಸರು ನೀಡಿದೆ.

ಯಾವ ಆಟವನ್ನೇ ಕೊಟ್ರು ರಾಜಕೀಯ ಮಾಡೋ ಮನೆಯಲ್ಲಿ ರಾಜಕೀಯವನ್ನೇ ಆಟವನ್ನಾಗಿ ಮಾಡಿದರೆ ಇನ್ನೆಷ್ಟು ರಾಜಕೀಯ ಮಾಡ್ತಾರೆ ಎಂಬುದನ್ನು ನೋಡಬೇಕಿದೆ. ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಸೌಧವಾಗಿ ಮಾರ್ಪಾಡಾಗಿದೆ. ಎಲ್ಲರೂ ರಾಜಕಾರಣಿಗಳ ಅವತಾರ ತಾಳಿದ್ದಾರೆ.


Share to all

You May Also Like

More From Author