ಡೇನಲ್ಲಿ ಬಸ್ಸಿನಲ್ಲಿ ಹೋಗತಿದ್ದಾ..ಮನೆಗಳನ್ನ ಮಾಕ್೯ ಮಾಡತಿದ್ದ..ನೈಟ್ ಬೈಕ್ ನಲ್ಲಿ ಹೋಗಿ ಮುಗಿಸೇ ಬಿಡತಿದ್ದಾ..ಡೇ ನೈಟ್ ಹುಸೇನನ್ನು ಹೆಡಮುರಿ ಕಟ್ಟಿದ ಹುಬ್ಬಳ್ಳಿ ಗ್ರಾಮೀಣ ಪೋಲೀಸರು..
“ಡೇ”ನಲ್ಲಿ ಬಸ್ಸಿನಲ್ಲಿ ಹೋಗತಿದ್ದಾ..ಮನೆಗಳನ್ನ ಮಾಕ್೯ ಮಾಡತಿದ್ದ..ನೈಟ್ ಬೈಕ್ ನಲ್ಲಿ ಹೋಗಿ ಮುಗಿಸೇ ಬಿಡತಿದ್ದಾ..ಡೇ ನೈಟ್ ಹುಸೇನನ್ನು ಹೆಡಮುರಿ ಕಟ್ಟಿದ ಹುಬ್ಬಳ್ಳಿ ಗ್ರಾಮೀಣ ಪೋಲೀಸರು..
ಹುಬ್ಬಳ್ಳಿ:-ಕಳ್ಳರು,ದಂಧೆಕೋರರರಿಗೆ ಸಿಂಹಸ್ವಪ್ನರಾಗಿರುವ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಹೊಸ ಪ್ರಕರಣ ಇರಲಿ,ಹಳೇ ಪ್ರಕರಣ ಇರಲಿ ಬೆನ್ನತ್ತಲು ಒಂದು ಸ್ಟ್ರಾಂಗ್ ಕ್ರ್ಯೆಂ ಟೀಮೇ ಇದೆ.ಆ ಕ್ರೈಂ ಟೀಮ್ ಈಗ ಹಲವು ಪೋಲೀಸ ಠಾಣೆಗಳಿಗೆ ಬೇಕಾಗಿದ್ದ ಡೇ ನೈಟ್ ಕಳ್ಳನನ್ನು ಬಂಧಿಸುವಲ್ಲಿ ಯಶಶ್ವಿಯಾಗಿದ್ದಾರೆ.
ಹಳೇಹುಬ್ಬಳ್ಳಿಯ ಹುಸೇನ್ ಹಸನಪ್ಪ ಅಂಚಟಗೇರಿ ಎಂಬಾತ ಹಗಲಿನಲ್ಲಿ ಬಸ್ಸಿನಲ್ಲಿ ಹೋಗಿ ಒಂಟಿ ಹಾಗೂ ಕೀಲಿ ಹಾಕಿದ ಮನೆಗಳನ್ನು ನೋಡಿಕೊಂಡು ಬಂದು ರಾತ್ರಿ ಬೈಕ್ ತೆಗೆದುಕೊಂಡು ಹೋಗಿ ಮನೆ ಕಳ್ಳತನ ಮಾಡಿ ಪರಾರಿಯಾಗತಿದ್ದ ಆರೋಪಿಯನ್ನು ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಆರೆಸ್ಟ್ ಮಾಡಿದ್ದೇ ಡಿಫರೆಂಟ್ ಕೇಸ್.
ಈತ ಕಳ್ಳತನ ಮಾಡಿ ಹಣ,ಬಂಗಾರ,ಬೆಳ್ಳಿ ಲಪಟಾಯಿಸಿ ಗೋವಾಕ್ಕೆ ಹೋಗಿ ಕಳ್ಳತನ ಮಾಡಿದ ಹಣ ಎಲ್ಲವೂ ಖಾಲಿ ಆಗೋವರೆಗೆ ಮೋಜು ಮಸ್ತಿ ಮಾಡಿ ಮತ್ತೆ ಹುಬ್ಬಳ್ಳಿ ಕಡೆಗೆ ಬಂದು ಮತ್ತೆ ಕಳ್ಳತನದ ಸ್ಕೆಚ್ ರೆಡಿ ಮಾಡಿಕೊಳ್ಳತಿದ್ದಾ ಅಂತಹ ಖತರನಾಕ ಕಳ್ಳನನ್ನು ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಕಳ್ಳತನ ಪ್ರಕರಣ ಬೇಧಿಸುವಲ್ಲಿ ಸಿಪಿಆಯ್ ಮುರಗೇಶ ಚನ್ನಣ್ಣವರ ಮಾರ್ಗದರ್ಶನದಲ್ಲಿ ಪಿಎಸ್ ಐ ಸಚಿನ್ ಹಾಗೂ ಬೆಳಗಾಂವಕರ ಎಎಸ್ಆಯ್ ಎನ್.ಎಮ್.ಹೊನ್ನಪ್ಪನವರ ಅಬ್ದುಲ್ ಕಾಕರ್.ಮಹಾಂತೇಶ ಮದ್ದೀನ.ಚಂದ್ರು,ಚನ್ನಪ್ಪ ಬಳ್ಳುಳ್ಳಿ.ಗಿರೀಶ ತಿಪ್ಪಣ್ಣವರ ,ರಚಿ ಸೇರಿದಂತೆ ಹಲವರು ಸೇರಿ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.