ಬಿಗ್ ಬಾಸ್ ನ ಎಲ್ಲಾ ಸೀಸನ್ ನಲ್ಲೂ ಒಂದಿಲ್ಲೊಂದು ಒಂದು ಲವ್ ಸ್ಟೋರಿ ಇದ್ದೇ ಇರುತ್ತದೆ. ಅದರಂತೆ ಬಿಗ್ ಬಾಸ್ 11 ರಲ್ಲೂ ಧರ್ಮ ಹಾಗೂ ಅನುಷಾ ರೈ ಅವರ ಮಧ್ಯೆ ಲವ್ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ.
ಅನುಷಾ ರೈ ಹಾಗೂ ಧರ್ಮ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಇದು ಅನೇಕರ ಕಣ್ಣು ಕುಕ್ಕಿದೆ. ಇದೇ ಕಾರಣ ಇಟ್ಟುಕೊಂಡು ಇವರನ್ನು ನಾಮಿನೇಟ್ ಮಾಡುವ ಕೆಲಸ ಕೂಡ ಆಗಿದೆ. ಇದು ಅನುಷಾಗೆ ಬೇಸರ ಮೂಡಿಸಿದೆ. ಈ ಕಾರಣಕ್ಕೆ ಅನುಷಾ ಅವರು ಈ ಬಗ್ಗೆ ಸ್ಪಷ್ಟನೆ ಕೊಡುವ ಕೆಲಸ ಮಾಡುತ್ತಿದ್ದಾರೆ.
ಕಳೆದ ವೀಕೆಂಡ್ನಲ್ಲಿ ಹನುಮಂತ ಅವರು ಈ ಬಗ್ಗೆ ಮಾತನಾಡಿದ್ದರು. ಸುದೀಪ್ ಎದುರೇ ಅನುಷಾ ಹಾಗೂ ಧರ್ಮ ಜೊತೆಗೆ ಆಪ್ತತೆಯ ಕಾರಣವನ್ನು ನೀಡಿದ್ದರು. ಅವರಿಬ್ಬರೂ ಕ್ಲೋಸ್ ಆಗಿರುತ್ತಾರೆ ಎಂದು ಹೇಳಿದರು. ಇದು ಅನುಷಾ ಕೋಪಕ್ಕೆ ಕಾರಣ ಆಗಿದೆ. ಈ ವಿಚಾರವಾಗಿ ಅವರು ಸ್ಪಷ್ಟನೆ ನೀಡುತ್ತಿದ್ದಾರೆ.
ನಾನು ಧರ್ಮ ಫ್ರೆಂಡ್ಸ್ ಅಷ್ಟೇ. ಯಾಕೆ ಎಲ್ಲರೂ ನಮ್ಮನ್ನು ಬೇರೆ ರೀತಿಯಲ್ಲಿ ನೋಡುತ್ತೀರಿ’ ಎಂದು ಅನುಷಾ ಅವರು ಮನೆಯಲ್ಲಿ ಕೆಲವರನ್ನು ಕೇಳಿದ್ದಾರೆ. ಇದೇ ವಿಚಾರ ವೀಕೆಂಡ್ನಲ್ಲಿ ಹೇಳಿದ್ದಕ್ಕೆ ಅನುಷಾ ಈ ಮೊದಲು ಸುದೀಪ್ ಅವರಿಂದ ಪಾಠ ಹೇಳಿಸಿಕೊಂಡಿದ್ದರು.