ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಮಾನಸಾ ಔಟ್ ಆಗಿದ್ದಾರೆ. ಐದು ವಾರಕ್ಕೆ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಮನೆಯಿಂದ ಹೊರ ಹೋಗುವಾಗ ಕಣ್ಣೀರು ಹಾಕಿದ್ದಾರೆ. ಸ್ಪರ್ಧಿಗಳ ಸಂಭಾವನೆ ವಿಚಾರ ಚರ್ಚೆಗೆ ಬರೋದು ಸಾಮಾನ್ಯ. ಈಗ ಮಾನಸಾ ಅವರು ತಮಗೆ ಸಿಕ್ಕ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ
ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಮಾನಸಾ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಯಾವುದೇ ಕಂಟೆಸ್ಟೆಂಟ್ ಹೊರಗಡೆ ಬಂದರೂ ಕೂಡ ಅವರನ್ನು ಸಂದರ್ಶನ ಮಾಡುವುದು ಎಂದು ಕಾಮನ್ನಾಗಿಬಿಟ್ಟಿದೆ. ಹೀಗಾಗಿ ಮಾನಸ ಅವರನ್ನು ಕೂಡ ಸಂದರ್ಶನ ಮಾಡಲಾಗಿದೆ. ಈ ಸಂದರ್ಶನದಲ್ಲಿ ತುಕಾಲಿ ಸಂತೋಷ ಕೂಡ ಭಾಗಿಯಾಗಿದ್ದಾರೆ.
ಈ ವೇಳೆ ಸಂದರ್ಶಕರು ಮಾನಸ ಅವರಿಗೆ ಪೇಮೆಂಟ್ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಮಾನಸಾ ಅವರು ತಮಗೆ ಸಿಕ್ಕ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ತುಕಾಲಿ ಸಂತೋಷ್ ‘ಆ ಬಗ್ಗೆ ಕೇಳಬೇಡಿ’ ಎಂದು ಹೇಳಿದರೆ, ಮಾನಸಾ ಅವರು ‘ಇನ್ನೂ ಪೇಮೆಂಟ್ ಆಗಿಲ್ಲ’ ಎಂದಿದ್ದಾರೆ. ಆದರೆ ಎಷ್ಟು ಪೇಮೆಂಟ್ ಸಿಗಬಹುದು, ಯಾವಾಗ ಸಿಗುತ್ತೆ ಎಂಬುದರ ಬಗ್ಗೆ ಮಾನಸ ಏನು ಹೇಳಿಲ್ಲ ಎನ್ನಲಾಗಿದೆ.