BBK11: ಅನುಷಾ-ಧರ್ಮ ನಡುವೆ ವಾಗ್ವಾದ: ಜೋಡಿ ಹಕ್ಕಿ ಜಗಳಕ್ಕೆ ಫ್ಯಾನ್ಸ್ ಬೇಸರ!

Share to all

ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಈ ವಾರ ಜೋಡಿಗಳಾಗಿ ಬದಲಾಗಿದ್ದು, ಮನೆಯಿಂದ ಆಚೆ ಹೋಗಲು ಈ ಜೋಡಿಗಳೇ ಎದುರಾಳಿ ಜೋಡಿಗೆ ನೇರವಾಗಿ ನಾಮಿನೇಟ್ ಮಾಡಲಿದ್ದಾರೆ.

ಧನರಾಜ್‌ , ಮೋಕ್ಷಿತಾ ಅವರ ಗೋಲ್ಡ್‌ ಸುರೇಶ್‌, ಅನುಷಾ ಅವರ ಹೆಸರನ್ನು ನಾಮಿನೇಷನ್‌ಗೆ ಹೇಳಿದ್ದಾರೆ. ಇನ್ನೊಂದು ಕಡೆ ಐಶ್ವರ್ಯಾ, ಧರ್ಮ ಅವರು ಸಹ ಸುರೇಶ್‌, ಅನುಷಾ ಅವರ ಹೆಸರನ್ನೇ ಹೇಳಿದ್ದಾರೆ. ಗೌತಮಿ, ಹನುಮಂತು ಕೂಡ ಸುರೇಶ್‌ ಅವರ ಹೆಸರನ್ನು ಹೇಳಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್‌ ಗೆಲ್ಲಲ್ಲು ತ್ರಿವಿಕ್ರಮ್ ಮತ್ತು ಮಂಜಣ್ಣ ಮಾಡಿಕೊಂಡ ಮ್ಯಾಚ್‌ ಫಿಕ್ಸಿಂಗ್‌ ಗೇಮ್‌ನಿಂದ ಬಿಗ್ ಬಾಸ್ ಬೇಸರ ಮಾಡಿಕೊಂಡು ಈ ವಾರ ಕ್ಯಾಪ್ಟನ್‌ಗೆ ಯಾವುದೇ ವಿಶೇಷ ಅಧಿಕಾರ ನೀಡುತ್ತಿಲ್ಲ. ಸ್ಪರ್ಧಿಗಳೇ ಮಾತನಾಡಿಕೊಂಡು ಒಂದು ಜೋಡಿಯನ್ನು ಈ ವಾರ ನೇರ ನಾಮಿನೇಟ್ ಮಾಡಬೇಕಿದೆ. ಈಗ ರಿಲೀಸ್ ಆಗಿರುವ ಪ್ರೋಮೋದಲ್ಲಿ ಪ್ರತಿಯೊಂದು ಜೋಡಿನೂ ಅನುಷಾ ಮತ್ತು ಗೋಲ್ಡ್‌ ಸುರೇಶ್‌ರನ್ನು ನಾಮಿನೇಟ್ ಮಾಡಿದ್ದಾರೆ. ‘ನಿಮ್ಮ ಸ್ಮೈಲ್ ನೋಡಿದರೆ ಖುಷಿ ಆಗುತ್ತೆ ಅಂತ ಅನುಷ ಹೇಳ್ತಾರೆ ಹಾಗೆ ಮತ್ತೊಂದು ದಿನ ನೋಡಿದರೆ ನೀವು ಫೇಕ್‌ ಎಂದು ಮುಖಕ್ಕೆ ಹೇಳುತ್ತಾರೆ’ ಎಂದು ಗೌತಮಿ ಕಾರಣ ಕೊಡುತ್ತಾರೆ. ‘ಮನೆಯಲ್ಲಿ ಅನುಷಾ ಇನ್‌ವಾಲ್ಮೆಂಟ್ ಬಹಳ ಕಡಿಮೆ ಇದೆ ಮನೆಯಲ್ಲಿ’ ಎಂದು ಚೈತ್ರಾ ಹೇಳಿದರೆ ‘ಅನುಷಾ ಅವರಲ್ಲಿ ಎಂಟರ್ಟೈನಿಂಗ್ ಫ್ಯಾಕ್ಟ್‌ ಅಷ್ಟು ಇಲ್ಲ’ಎಂದು ಮೋಕ್ಷಿತಾ ಹೇಳುತ್ತಾರೆ. ಇನ್ನು ಅನುಷಾ ಆಪ್ತ ಸ್ನೇಹಿತಾ ಧರ್ಮಕೀರ್ತಿ ರಾಜ್‌ ‘ಅನುಷಾ ಅವರಲ್ಲಿ ಅಗ್ರೆಷನ್‌ ತುಂಬಾನೇ ಕಡಿಮೆ ಇದೆ ಇನ್ನು ಮುಂದೆ ನುಗ್ಗಬೇಕು’ಎನ್ನುತ್ತಾರೆ.

ಪ್ರತಿ ಜೋಡಿಯ ಕಾರಣ ಕೇಳಿದ ಮೇಲೆ ಅನುಷಾ ಉತ್ತರ ಕೊಡಲು ಮುಂದಾಗುತ್ತಾರೆ. ‘ಮೋಕ್ಷಿತಾ ಅವರೇ ಬಿಗ್ ಬಾಸ್ ಮನೆಯಲ್ಲಿ ನೀವು ಎಷ್ಟು ಎಂಟರ್ಟೈನಿಂಗ್ ಆಗಿದ್ದೀರಾ? ಗೌತಮಿ ಈಗಲೂ ನಿಮ್ಮ ಮುಖಕ್ಕೆ ನಾನು ಉತ್ತರಿಸುತ್ತಿರುವ ನೀವು ಫೇಕ್, ಧರ್ಮ ನನ್ನ ಅಗ್ರೆಷನ್‌ ಬಗ್ಗೆ ನೀವು ಮಾತನಾಡುತ್ತಿದ್ದೀರಾ ನನ್ನ ಅಗ್ರೆಷನ್ ಕಡಿಮೆ ಆಯ್ತು ಎಂದು ನಿಮ್ಮ ಅಗ್ರೆಷನ್ ಎಷ್ಟಿದೆ? ಧರ್ಮ ನೀವೂ ಏನೂ ಆಟವಾಡಿಲ್ಲ ನೀವು ಎಷ್ಟು ಭಾಗಿಯಾಗಿದ್ದೀರಾ? ಎಂದು ಅನುಷಾ ಹೇಳುತ್ತಾರೆ. ನನ್ನ ಬಗ್ಗೆ ನಾನು ಒಪ್ಪಿಕೊಂಡಿರುವೆ…ಮನೆ ಮಂದಿ ಎಲ್ಲಾ ಸೇರಿಕೊಂಡು ನನ್ನನ್ನು ನಾಲಾಯಕ್ ಬೇವರ್ಸಿ ಎಂದು ಉಗಿದ್ದಿದ್ದಾರೆ ಅಷ್ಟು ಸಾಲದಾ? ಎಂದು ಧರ್ಮ ಉಲ್ಟಾ ಉತ್ತರಿಸುತ್ತಾರೆ.


Share to all

You May Also Like

More From Author