ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಟಾಸ್ಕ್ಗಳು ಜೋರಾಗಿ ನಡೆಯುತ್ತಿವೆ. ಇದರ ಜೊತೆಗೆ ಆಗಾಗ್ಗೆ ಬಿಗ್ಬಾಸ್ ಕೆಲವು ಸರ್ಪ್ರೈಸ್ಗಳನ್ನು ಸಹ ಕೊಡುತ್ತಿದ್ದಾರೆ. ಇದೀಗ ಬಿಗ್ಬಾಸ್ ಮನೆಗೆ ‘ರಾಮಾಚಾರಿ’ ಧಾರಾವಾಹಿಯ ನಟರು ಆಗಮಿಸಿದ್ದಾರೆ. ಮನೆಯವರೆಲ್ಲ ನಟ-ನಟಿಯರೊಡನೆ ಬೆರೆತು ಆಟವಾಡಿದ್ದಾರೆ
ಸ್ಪರ್ಧಿಗಳನ್ನು ನೋಡಲು ಮನೆಗೆ ರಾಮಾಚಾರಿ ಧಾರಾವಾಹಿಯ ಚಾರು ಹಾಗೂ ರಾಮಾಚಾರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ ಅವರಿಗೂ ಸೊಂಟದ ಪಟ್ಟಿ ಕೊಡುತ್ತಾರೆ. ಮನೆಗೆ ಬಂದ ಚಾರುವನ್ನು ಇಂಪ್ರೆಸ್ ಮಾಡಲು ಸ್ಪರ್ಧಿಗಳು ಪ್ರಯತ್ನಿಸುತ್ತಾರೆ. ನನ್ನನ್ನು ಅಣ್ಣ ಎನ್ನಬೇಡಿ ಎಂದು ಮಂಜು ಹೇಳಿದರೆ, ಹನುಮಂತ ಚಾರುವಿಗೆ ರೋಸ್ ಕೊಟ್ಟು ಹಾಡು ಹಾಡುತ್ತಾರೆ.
ಅದೇನೆಂದರೆ, ಸದ್ಯ ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ಟಾಸ್ಕ್ ನಡೆಯುತ್ತಿದೆ. ಹೀಗಾಗಿ ತಾವಿಬ್ಬರು ಜೋಡಿಯಾಗಿ ಇರುವಂತೆ ಒಬ್ಬರನ್ನೊಬ್ಬರು ಬಿಟ್ಟು ಹೋಗದಂತೆ ಜೊತೆಯಾಗಿರಲು ಹಗ್ಗವನ್ನು ನೀಡಿದ್ದಾರೆ. ಸ್ಪರ್ಧಿಗಳಂತೆ ರಾಮಚಾರಿ ಮತ್ತು ಚಾರು ಕೂಡ ಹಗ್ಗವನ್ನು ಕಟ್ಟಿಕೊಂಡಿದ್ದಾರೆ.
ದೊಡ್ಮನೆಯಲ್ಲಿ ಮನರಂಜನೆ ನೀಡಲು ‘ರಾಮಾಚಾರಿ’ ಸೀರಿಯಲ್ ಜೋಡಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದಾರೆ. ಬಿಗ್ ಬಾಸ್ ಶೇರ್ ಮಾಡಿರುವ ವಿಡಿಯೋದಲ್ಲಿ, ಚಾರು ಅವರು ಹನುಮಂತಗೆ ತಮ್ಮನ್ನು ಇಂಪ್ರೆಸ್ ಮಾಡುವಂತೆ ಗುಲಾಬಿ ಹೂ ನೀಡಿದ್ದಾರೆ. ಹನುಮಂತ ಅವರು ತಮ್ಮ ಶೈಲಿಯಲ್ಲಿ ಹಾಡನ್ನು ಹೇಳಿ, ಮಂಡಿಯೂರಿ ಚಾರುಗೆ ಇಂಪ್ರೆಸ್ ಮಾಡಲು ಪ್ರಯತ್ನಿಸಿದ್ದಾರೆ. ನನ್ನ ಕಣ್ಣು ನಿನ್ನ ಮೇಲೆ ಎಂದು ಹಾಡುತ್ತಾ ಗುಲಾಬಿ ಹೂ ಕೊಟ್ಟು ಮಂಡಿಯೂರಿ ಪ್ರಪ್ರೋಸ್ ಮಾಡಿದ್ದಾರೆ. ಹನುಮಂತನ ಪ್ರೇಮ ನಿವೇದನೆಗೆ ಚಾರು ನಾಚಿ ನೀರಾಗಿದ್ದಾರೆ. ಹನುಮಂತನ ನಡೆಗೆ ಸಹಸ್ಪರ್ಧಿಗಳು ಅಚ್ಚರಿಗೊಂಡಿದ್ದಾರೆ.