ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಅಭಿಮಾನಿಗಳ ವಿರುದ್ಧ ಒಳ್ಳೆ ಹುಡುಗ ಪ್ರಥಮ್ ತಮ್ಮದೇ ಆದ ರೀತಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.ಎಸ್, ಇತ್ತೀಚೆಗೆ ರೇಣುಕಾಚಾರ್ಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಮೇಲೆ ನಟ ದರ್ಶನ್ ಫ್ಯಾನ್ಸ್ ಮೇಲೆ ಒಳ್ಳೆ ಹುಡುಗ ಪ್ರಥಮ್ ತಿರುಗಿ ಬಿದ್ದಿದ್ದರು. ಇದು ದರ್ಶನ್ ಅಭಿಮಾನಿಗಳ ಕೋಪ ನೆತ್ತಿಗೇರುವಂತೆ ಮಾಡಿತ್ತು.
ಅಲ್ಲದೇ ಅದಾದ ಬಳಿಕ ದರ್ಶನ್ ಫ್ಯಾನ್ಸ್ ಹಾಗೂ ಪ್ರಥಮ್ ನಡುವೆ ವಾರ್ ನಡೆಯುತ್ತಲೇ ಇದೆ. ಇದೀಗ ದರ್ಶನ್ ಫ್ಯಾನ್ಸ್ ಮೇಲೆ ಪ್ರಥಮ್ ಮತ್ತೆ ತಿರುಗಿ ಬಿದ್ದಿದ್ದಾರೆ.ಹೀಗಾಗಿ ಪ್ರಥಮ್ ಮೇಲೆ ದರ್ಶನ್ ಫ್ಯಾನ್ಸ್ ನಿಂದ ಹಲ್ಲೆ ನಡೀತಾ ಎಂಬ ಅನುಮಾನ ಮೂಡಿದೆ. ಇದೀಗ ಪ್ರಥಮ್ ಅವರು ಮಾಡಿರುವ ಒಂದು ಪೋಸ್ಟ್ ಈ ಅನುಮಾನಕ್ಕೆ ಕಾರಣವಾಗಿದೆ.
ನಿಗೂಢವಾಗಿಯೇ ಪ್ರಥಮ್ ಪೋಸ್ಟ್ ಹಾಕಿದ್ದು, ಹೋಟೆಲ್ ನಲ್ಲಿ ಪ್ರಥಮ್ ಮೇಲೆ ಅಟ್ಯಾಕ್ ಆಯ್ತಾ ಎಂಬ ಗುಮಾನಿ ಮೂಡಿದೆ. ನಮ್ಮ ಪಾಡಿಗೆ ನಾವಿದ್ದೇವೆ, ನಿಮ್ಮ ಪಾಡಿಗೆ ನೀವಿರಿ. ದರ್ಶನ್ ಸರ್ ಅವರ ಪಾಡಿಗೆ ಅವರಿದ್ದಾರೆ.ಮಿನಿ ಗೂಂಡಾಗಳ ನಿಗರಾಟ ನೋಡೋಕೆ ಆಗ್ತಿಲ್ಲ. ಹೋಟೆಲ್ CCTV ಇದೆ, ಮುಂದುವರೆದರೆ ನಾನು ಸುಮ್ಮನೆ ಕೂರಲ್ಲ. ಹೋಟೆಲ್ ಸಿಬ್ಬಂದಿ ಮನವಿಯ ಮೇರೆಗೆ ದೂರು ಕೊಡದಿರಲು ಒಳ್ಳೆ ಹುಡುಗ ಪ್ರಥಮ್ ನಿರ್ಧಾರ ಮಾಡಿದ್ದಾರೆ. ಸದ್ಯಕ್ಕೆ ನಟ ದರ್ಶನ್ ಹೆಲ್ತ್ ಬೇಲ್ ಮೇಲಿದ್ದು, ಹಲವು ದಿನಗಳ ಹಿಂದೆ ದರ್ಶನ್ ಫ್ಯಾನ್ಸ್ ಗೆ ಪ್ರಥಮ್ ಬುದ್ಧಿ ಹೇಳಿದ್ದರು.