ಬಿಗ್ ಬಾಸ್ ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಎಂದು ಹೇಳಲಾಗಿತ್ತು. ಆದ್ರೆ ಈ ವಾರ ಒಬ್ಬರೇ ಮನೆಯಿಂದ ಹೊರಗೆ ಹೋಗಿದ್ದಾರೆ. ಅನುಷಾ ರೈ ದೊಡ್ಮನೆಯಿಂದ ಹೊರ ಹೋಗಿದ್ದಾರೆ. ಶೋಭಾ ಶೆಟ್ಟಿ ಮತ್ತು ರಂಜಿತ್ ಅವರು ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ.
ಈ ವಾರ ಅನುಷಾ ರೈ ಅವರು ನೇರವಾಗಿ ನಾಮಿನೇಟ್ ಆಗಿದ್ದರು. ಅವರ ಜೊತೆಗೆ ‘ಗೋಲ್ಡ್’ ಸುರೇಶ್ ಕೂಡ ನೇರವಾಗಿ ನಾಮಿನೇಟ್ ಆಗಿದ್ದರು. ಧನರಾಜ್ ಆಚಾರ್, ಧರ್ಮ ಕೀರ್ತಿರಾಜ್, ಮೋಕ್ಷಿತಾ ಪೈ, ಶಿಶಿರ್, ಭವ್ಯಾ ಗೌಡ, ‘ಉಗ್ರಂ’ ಮಂಜು, ಗೌತಮಿ ಜಾಧವ್, ಹನುಮಂತ ಈ ವಾರ ನಾಮಿನೇಟ್ ಝೋನ್‌ನಲ್ಲಿದ್ದರು. ಆದರೆ ಅಂತಿಮವಾಗಿ ಉಳಿದ ಇಬ್ಬರೆಂದರೆ, ಧರ್ಮ ಕೀರ್ತಿರಾಜ್ & ಅನುಷಾ ರೈ! ಇವರಿಬ್ಬರಲ್ಲಿ ಯಾರು ಹೊರಗೆ ಹೋಗಬಹುದು ಎಂಬ ಕುತೂಹಲ ಇತ್ತು. ಕೊನೆಗೆ ಅನುಷಾ ಮೇಲೆ ರೆಡ್ ಲೈಟ್ ಮೇಲೆ ಬಿತ್ತು. ಹಾಗಾಗಿ, ಅವರನ್ನು ಎಲಿಮಿನೇಟ್ ಮಾಡಬೇಕಾಯಿತು. ಅನುಷಾ ಎಲಿಮಿನೇಟ್ ಆಗಿದ್ದಕ್ಕೆ ಧರ್ಮ ಕಣ್ಣೀರಿಟ್ಟರು
ಅನುಷಾ ರೈ ಅವರು ತುಂಬಾ ಸೆನ್ಸಿಟಿವ್ ಅಂತ ಆರಂಭಲ್ಲೇ ಅನ್ನಿಸಿದರು. ಸುದೀಪ್ ಅವರ ಬಳಿ ತಮ್ಮ ಎಲಿಮಿನೇಷನ್‌ಗೆ ಕಾರಣ ಏನಿರಬಹುದು ಎಂಬುದನ್ನು ತಿಳಿಸಿದ ಅನುಷಾ ರೈ, “ನಾನು ಎಲಿಮಿನೇಟ್ ಆಗಿದ್ದು ತುಂಬ ಬೇಜಾರಾಗಿದೆ. ಇಷ್ಟು ಬೇಗ ನಾನು ಎಲಿಮಿನೇಟ್ ಆಗುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಬಿಗ್ ಬಾಸ್ ಮನೆಯೊಳಗೆ ನಾನಿನ್ನೂ ಸ್ಟ್ರಾಂಗ್ ಆಗಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಬಿಗ್ ಬಾಸ್ ಆಟವನ್ನು ಅದೇ ರೀತಿ ಆಡಬೇಕಿತ್ತು. ನಾನು ಮನೆಯೊಳಗೆ ತುಂಬ ಎಮೋಷನಲ್ ಆಗಿಬಿಟ್ಟೆ. ಯಾರಿಗಾದರೂ ನೋವಾಗುತ್ತೇನೋ ಅಂತ ನಾನೇ ಹಿಂಜರಿದೆ. ನನಗೆ ಮೋಸ ಆಗಿದ್ದರೂ ನಾನು ಅದನ್ನು ಹೇಳಿಕೊಳ್ಳಲಿಲ್ಲ. ಇನ್ನೂ ಜಾಸ್ತಿ ಎಫರ್ಟ್ ಹಾಕಬೇಕಿತ್ತು” ಎಂದು ಹೇಳಿದ್ದಾರೆ.