ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ ಆಗ್ತಿದ್ದಂಗೆ ಲಾಯರ್ ಜಗದೀಶ್ ಬೈಗುಳಗಳ ಮೂಲಕವೇ ಸಾಕಷ್ಟು ಸದ್ದು ಮಾಡಿದ್ರು. ಆದ್ರೆ ಹಂಸ ಅವರಿಗೆ ಕೆಟ್ಟ ಪದ ಬಳಕೆ ಮಾಡಿದ್ರಿಂದ ಬಿಗ್ಬಾಸ್ ಲಾಯರ್ ಜಗದೀಶ್ಗೆ ಶಿಕ್ಷೆ ರೂಪದಲ್ಲಿ ಮನೆಯಿಂದಲೇ ಹೊರಹಾಕಿದ್ರು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ರಜತ್ ಕಿಶನ್ಗೆ ಮಾತಿನ ಮೇಲೆ ಹಿಡಿತವೇ ಇಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಲಾಯರ್ ಜಗದೀಶ್ ಅವರನ್ನು ಹೊರಹಾಕಿದ ಹಾಗೇ ರಜತ್ ಅವರನ್ನು ಯಾಕೆ ಹೊರಗೆ ಹಾಕಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಹಾಕುತ್ತಿದ್ದಾರೆ.
ಈ ವಾರ ಎರಡು ತಂಡಗಳಾಗಿ ಟಾಸ್ಕ್ ಆಡಲಿದ್ದು ಭವ್ಯ ಹಾಗೂ ಶೋಭಾ ತಂಡದ ಸದಸ್ಯರು ವಾರದ ಟಾಸ್ಕ್ ನಲ್ಲಿ ಸೆಣಸಾಟ ನಡೆಸಲಿದ್ದಾರೆ.
ಚೆಂಡುಗಳನ್ನು ತಮಗೆ ಮೀಸಲಿಡುವ ಚೌಕಟ್ಟಿನೊಳಗೆ ಇಡುವ ಟಾಸ್ಕ್ ನೀಡಲಾಗಿದೆ. ಇದರಲ್ಲಿ ಎರಡು ತಂಡದ ಸದಸ್ಯರು ಪರಸ್ಪರ ರೋಷಾ ವೇಶದಿಂದ ಕಾಣಿಸಿಕೊಂಡಿದ್ದಾರೆ. ಕಾಲಿನಲ್ಲಿ ಚೆಂಡು ಹಿಡಿದು ಹೋದ ವಿಚಾರಕ್ಕೆ ಸುರೇಶ್- ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ.
ಬಿಗ್ ಬಾಸ್ ಮನೆಯಲ್ಲಿ ʻಚೆಂಡು ನಾ ನಿನ್ನ ಬಿಡಲಾರೆʼ ಟಾಸ್ಕ್ನಲ್ಲಿ ಗೋಲ್ಡ್ ಸುರೇಶ್ ಮತ್ತು ರಜತ್ ನಡುವೆ ಬೈಗುಳಗಳ ಯುದ್ಧ ಶುರುವಾಗಿದೆ. ಬಾಲ್ ಹಿಡಿಯುವ ಟಾಸ್ಕ್ ವೇಳೆ ಸಣ್ಣ ಕಿರಿಕ್ ಶುರುವಾಗಿತ್ತು. ಇದನ್ನೇ ಅಸ್ತ್ರ ಮಾಡಿಕೊಂಡಂತೆ ಕಂಡ ರಜತ್, ಸುರೇಶ್ ಮೇಲೆ ಮಾತಿನ ಯುದ್ಧ ಶುರು ಮಾಡಿದ್ರು. ಅವಾಚ್ಯ ಪದಗಳಿಂದ ನಿಂದಿಸಿದ್ರು. ಮೊದಮೊದಲು ಸುಮ್ಮನೆ ಇದ್ದ ಸುರೇಶ್ ಮತ್ತೆ ಮತ್ತೆ ಅವಾಚ್ಯ ಪದ ಬಳಕೆ ಮಾಡಿದಕ್ಕೆ ಗರಂ ಆಗಿ ರಜತ್ ಮೇಲೆ ಮುಗಿಬಿದ್ರು. ಇದಾದ ಮೇಲೂ ಇನ್ನೂ ಕೆಟ್ಟ ಕೆಟ್ಟ ಪದ ಬಳಿಸಿ ಗೋಲ್ಡ್ ಸುರೇಶ್ಗೆ ಟಾರ್ಗೆಟ್ ಮಾಡಿದ ರಜತ್ ಟಾಸ್ಕ್ ನಡುವೆ ಎಲ್ಲರ ಕಂಗೆಣ್ಣಿಗೆ ಗುರಿಯಾಗಿದ್ರು. ಈ ನಡುವೆ ಬಿಗ್ಬಾಸ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಇನ್ನಷ್ಟು ಕೋಪಗೊಂಡ ಗೋಲ್ಡ್ ಸುರೇಶ್ ಆಟದಿಂದ ಹೊರನಡೆದು ರಜತ್ ವಿರುದ್ಧ ಆಕ್ರೋಶ ಹೊರಹಾಕಿದ್ರು.
ತಂಡದ ಸದಸ್ಯರು ಎಷ್ಟೇ ಮಾತನಾಡಿದ್ರು ತಾಳ್ಮೆ ಕಳೆದುಕೊಂಡಿದ್ದ ಸುರೇಶ್ ಮನೆಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ರು.
ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಅನ್ನೋ ಹಾಗೇ ಗೋಲ್ಡ್ ಸುರೇಶ್ ಕೋಪದಲ್ಲಿ ಇದ್ರೂ ರಜತ್ ಮತ್ತೆ ಸ*ಡೆ ಅನ್ನೋ ಪದ ಉಪಯೋಗ ಮಾಡುವ ಮೂಲಕ ಸುರೇಶ್ಗೆ ಇನ್ನಷ್ಟು ಕೋಪ ಬರುವಂತೆ ಮಾಡಿದ್ರು. ಮುಖ ಕೆಂಪಾಗಿಸಿಕೊಂಡು ಬಿಗ್ಬಾಸ್ಗೆ ಅವಾಜ್ ಹಾಕಿದ ಸುರೇಶ್ ಮನೆಯಿಂದ ನನ್ನ ಹೊರಗೆ ಕಳಿಸಿ ಎಂದು ಬೊಬ್ಬೆ ಹೊಡೆದರು.. ಬಿಗ್ಬಾಸ್ ಮನೆಯ ಬಾಗಿಲು ತಟ್ಟಿ ನನ್ನ ಕೂಡಲೇ ಹೊರಗೆ ಕಳಿಸಿ ಎಂದು ಕಿರುಚಾಡಿದ್ರು. ಯಾರ ಮಾತಿಗೂ ಸಮಾಧಾನ ಆಗದ ಸುರೇಶ್ ಆಟವನ್ನೇ ಆಡಲ್ಲ ಎಂದು ಹೇಳಿ ಹೊರಗೆ ಕುಳಿತರು. ಆದ್ರೂ ಸುರೇಶ್ ವಿರುದ್ಧ ಮುಗಿಬಿದ್ದ ರಜತ್, ಪದೇ ಪದೇ ಸುರೇಶ್ ವಿರುದ್ಧ ಪದಪ್ರಯೋಗದ ಮೂಲಕ ಇನ್ನೂ ಕೋಪ ತರಿಸುವಂತೆ ಮಾಡಿದ್ರು.