ಆರು ವರ್ಷ ನೀನೇ ನನ್ನ ಮುದ್ದು ಬಂಗಾರ ಎಂದವನೂ ಕೈಕೊಟ್ಟ.ಸಪ್ತಪದಿ ತುಳಿದವನೂ ನೀ ನನಗೆ ಬೇಡಾ ಎಂದ.ಬೀದಿಗೆ ಬಿದ್ದ ಪಾಗಲ್ ಪ್ರೇಮಿ.

Share to all

ಆರು ವರ್ಷ ನೀನೇ ನನ್ನ ಮುದ್ದು ಬಂಗಾರ ಎಂದವನೂ ಕೈಕೊಟ್ಟ.ಸಪ್ತಪದಿ ತುಳಿದವನೂ ನೀ ನನಗೆ ಬೇಡಾ ಎಂದ.ಬೀದಿಗೆ ಬಿದ್ದ ಪಾಗಲ್ ಪ್ರೇಮಿ.

ಬೆಳಗಾವಿ:-ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿಯ ಬದುಕು ಈಗ ಬೀದಿಗೆ ಬಂದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ನಡೆದಿದೆ.

ಕಿತ್ತೂರಿನ‌ ಮುತ್ತುರಾಜ ಎಂಬ ಯುವಕನಿಂದಲೇ ಯುವತಿಯ ಬದುಕು ಮೂರಾಬಟ್ಟೆಯಾಗಿದೆ.ಕಳೆದ ಆರು ವರ್ಷದಿಂದ ಯುವತಿಯನ್ನು ಪ್ರೀತಿಸುತ್ತಿದ್ದ.ನಂತರ ನಮ್ಮ ಮನೆಯಲ್ಲಿ ಒಪ್ಪುತ್ತಿಲ್ಲಾ ನೀನು ನಿಮ್ಮ ಮನೆಯವರು ಹುಡುಕಿದವನ ಜೊತೆ ಮದುವೆಯಾಗು ಎಂದಿದ್ದನು.

ಅದೇ ರೀತಿ ಯುವತಿ ಮನೆಯವರು ಹುಡುಕಿದ ವರನ ಜೊತೆ ಮದುವೆಯಾಗಿ ಹೋದ ದಿನವೇ ಗಂಡನ ಮನೆಯ ಸಂಬಂಧಿಯೊಬ್ಬರಿಗೆ ಯುವತಿಯ ಜೊತೆ ಇದ್ದ ಅಶ್ಲೀಲ ಪೋಟೋ ಶೇರ್ ಮಾಡಿದ್ದ.ಅದರಿಂದ ಕೋಪಗೊಂಡ ಗಂಡನ ಕಡೆಯವರು ಹುಡುಗಿ ನಮಗೆ ಬೇಡಾ ಎಂದು ತವರು ಮನೆಗೆ ಕಳಿಸಿದ್ದಾರೆ.

ಯುವತಿ ತವರು ಮನೆಗೆ ಬಂದ ಕೂಡಲೇ ಪ್ರೇಮಿಯ ಮನೆಗೆ ಹೋಗಿ ನನಗೆ ಲೈಪ್ ಕೊಡು ನನ್ನ ಜೀವನ ಹಾಳು ಮಾಡಿದ್ದೀಯಾ ಎಂದು ಗಲಾಟೆ ಮಾಡಿದ್ದಾಳೆ.ಅಷ್ಟೇ ಅಲ್ಲದೇ ಈಗ ಪ್ರಕರಣ ಪೋಲೀಸ ಠಾಣೆಯ ಮೆಟ್ಟಿಲೇರಿದ್ದು.ಹುಚ್ಚಾಟ ಮೆರೆದಿದ್ದ ಯುವಕನ ಮಂಗನ ಆಟಕ್ಕೆ ಮನೆಯವರೂ ಪೋಲೀಸ ಠಾಣೆ ಮೆಟ್ಟಿಲೇರುವಂತಾಗಿದೆ.

ಉದಯ ವಾರ್ತೆ ಬೆಳಗಾವಿ


Share to all

You May Also Like

More From Author