ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ನರಕದ ದಿನಗಳನ್ನು ಕಳೆಯುತ್ತಿದ್ದಾರೆ. ಪರಪ್ಪನ ಅಗ್ರಹಾರದ ಒಂಟಿ ಕೋಣೆಯಲ್ಲಿ ದಿನ ದೂಡುತ್ತಿರುವ ದರ್ಶನ್‌ಗೆ ಪಾಪದ ಪ್ರಜ್ಞೆ ಕಾಡುತ್ತಿದೆ. ಜೈಲಿಂದ ಬಿಡುಗಡೆಯಾಗಿ ಬಂದ ದಚ್ಚುವಿನ ಅಭಿಮಾನಿಯೊಬ್ಬರು, ದರ್ಶನ್ ದಿನ ದೂಡುತ್ತಿರೋದು ಹೇಗೆ?ದಿನಚರಿ ಹೇಗಿದೆ? ದೈಹಿಕ -ಮಾನಸಿಕ ಸ್ಥಿತಿ ಏನಾಗಿದೆ? ಎಂಬ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕೊಲೆ ಪ್ರಕರಣದಲ್ಲಿ ಲಾಕ್ ಆಗಿರುವ ದರ್ಶನ್ ಪಾಲಿಗೆ ಮಾತ್ರವಲ್ಲ, ಇಡೀ ಕನ್ನಡ ಚಿತ್ರರಂಗಕ್ಕೆ ಒಂದು ಕರಾಳ ಅಧ್ಯಾಯವಾಗಿದೆ. ನನಗೆ ಈ ಸ್ಥಿತಿ ಬರಬಹುದು ಎಂದು ದರ್ಶನ್ ಕನಸ್ಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲವೇನೋ. ಆದರೆ ಕರ್ಮ ಯಾರನ್ನು ಬಿಡೋದಿಲ್ಲ.
ಮೊನ್ನೆ ಮೊನ್ನೆಯಷ್ಟೆ ಪರಪ್ಪನ ಅಗ್ರಹಾರದಿಂದ 77 ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು. ಹೀಗೆ ಜೈಲಿನಿಂದ ಬಿಡುಗಡೆಯಾದವರಲ್ಲಿ ಸಿದ್ಧಾರೂಢ ಕೂಡ ಒಬ್ಬರು. ಸಿದ್ಧಾರೂಢ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ರನ್ನು ಭೇಟಿಯಾಗಿದ್ದು, ದರ್ಶನ್ ಕುರಿತಾದ ಅನೇಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಜೈಲಿಗೆ ಕಾಲಿಟ್ಟ ಮೊದಲ ದಿನದಿಂದಲೇ ದರ್ಶನ್‌ಗೆ ಪಾಪಪ್ರಜ್ಞೆ ಕಾಡೋದಿಕ್ಕೆ ಆರಂಭವಾಗಿದೆ. ದರ್ಶನ್‌ರ ಕಣ್ಣು, ಅವರ ಮಾತು, ಅವರ ಹಾವಭಾವವೇ ಅವರಿಗೆ ಕಾಡುತ್ತಿರುವ ಪಾಪಪ್ರಜ್ಞೆಯ ಬಗ್ಗೆ ಸಾರಿ ಸಾರಿ ಹೇಳುತ್ತಿದೆ. ಅಯ್ಯೋ…ಇದೇನು ಮಾಡಿಕೊಂಡು ಬಿಟ್ಟೆ.. ನಾನೇ ನನ್ನ ಕೈಯಾರೆ ನನ್ನ ಬದುಕನ್ನು ಹಾಳು ಮಾಡಿಕೊಂಡು ಬಿಟ್ನಲ್ಲ ಅನ್ನೋ ನೋವು ಜೈಲಿನಲ್ಲಿ ದರ್ಶನ್‌ಗೆ ಕಾಡೋದಿಕ್ಕೆ ಶುರುವಾಗಿದ್ಯಂತೆ. ಈ ನೋವು, ಹತಾಶೆ, ದುಃಖದಿಂದ ಹೊರಬರೋದಿಕ್ಕೆ ದರ್ಶನ್ ಒಂದು ದಾರಿಯನ್ನು ಕಂಡುಕೊಂಡಿದ್ದರಂತೆ.. ಅದುವೇ ಆಧ್ಯಾತ್ಮದ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ದೈಹಿಕವಾಗಿ ಕುಗ್ಗಿ ಹೋಗಿದ್ದಾರೆ. ಜೈಲು ಸೇರಿದ ಬಳಿಕ ದರ್ಶನ್ ತೂಕದಲ್ಲಿಯೂ ಇಳಿಕೆಯಾಗಿದೆ. ಇದೇ ರೀತಿ ಮಾನಸಿಕವಾಗಿಯೂ ದರ್ಶನ್ ಜೈಲಿನಲ್ಲಿ ದಿನೆದಿನೇ ಸಂಕಟ ಅನುಭವಿಸುವಂತಾಗಿದೆ. ಛೇ..ಇದೇನು ಮಾಡಿಕೊಂಡು ಬಿಟ್ಟೆ ಅನ್ನೋ ನೋವು ದರ್ಶನ್‌ನನ್ನು ಕಾಡುತ್ತಿದೆ. ಹೀಗಾಗಿಯೇ ದರ್ಶನ್ ಜೈಲಿನಲ್ಲಿ ಆಧ್ಯಾತ್ಮದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಆಧ್ಯಾತ್ಮದ ಮೂಲಕ ಮಾನಸಿಕವಾಗಿ ಒಂದಿಷ್ಟು ಗಟ್ಟಿಯಾಗೋದಿಕ್ಕೆ. ಸನ್ಮಾರ್ಗದಲ್ಲಿ ಸಾಗೋದಿಕ್ಕೆ ದರ್ಶನ್ ಪ್ರಯತ್ನಿಸುತ್ತಿದ್ದಾರೆ ಎಂದು ಸಹಖೈದಿ ಸಿದ್ಧಾರೂಢ ತಿಳಿಸಿದ್ದಾರೆ.