ಪ್ರೀತಿಸಿ ಮದುವೆಯಾದ ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಅವರು ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದಾರೆ. ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಒಂದಾಗದ ಇವರು ನಿಜ ಜೀವನದಲ್ಲಿ ಬಹಳ ಪ್ರೀತಿಯಿಂದ ಜೀವನ ಮಾಡ್ತಿದ್ದಾರೆ.
ಇತ್ತೀಚೆಗೆ ಈ ದಂಪತಿ ಖುಷಿ ವಿಚಾರ ಸುದ್ದಿ ಹಂಚಿಕೊಂಡಿದ್ದರು. ಅದುವೆ ಮೊದಲ ಮಗುವಿನ ಬಗ್ಗೆ. ಆ ಬಳಿಕ ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ. ಮಿಲನಾ ಅವರು ಸೆಪ್ಟೆಂಬರ್ನಲ್ಲಿ ಮಗುವಿಗೆ ಜನ್ಮನೀಡಲಿದ್ದಾರೆ. ಆ ದಿನಕ್ಕಾಗಿ ಅವರ ಕುಟುಂಬ ಹಾಗೂ ಫ್ಯಾನ್ಸ್ ಕಾದಿದ್ದಾರೆ. ಇದಕ್ಕೂ ಮೊದಲು ವಿವಿಧ ಫೋಟೋಗಳನ್ನು ಮಿಲನಾ ಅವರು ಹಂಚಿಕೊಳ್ಳುತ್ತಾ ಇದ್ದಾರೆ.
ಈಗ ತುಂಬು ಗರ್ಭಿಣಿ ಆಗಿ ಮಿಲನಾ ನಾಗರಾಜ್ ಅವರು ಫೋಟೋಶೂಟ್ ಮಾಡಿಸಿದ್ದಾರೆ. ಪತಿಯ ಜೊತೆ ಅವರು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಮಿಲನಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಮಗು ಜನಿಸಿದ ಬಳಿಕ ಅದರ ಆರೈಕೆಯಲ್ಲಿ ಅವರು ಬ್ಯುಸಿ ಆಗಲಿದ್ದಾರೆ.