ಗಯಾ:- ಕಲೀಮುಲ್ಲಾ ಎಂಬ ಹೆಸರಿನ 70 ವರ್ಷದ ವ್ಯಕ್ತಿ 25 ವರ್ಷದ ಯುವತಿಯನ್ನು ಮದುವೆಯಾಗಿ ಭಾರೀ ಸುದ್ದಿಯಾಗಿದ್ದಾನೆ. ಬಿಹಾರದ ಗಯಾದಲ್ಲಿ ಈ ಘಟನೆ ಜರುಗಿದೆ. ಅಚ್ಚರಿಯೆಂದರೆ ಮದುವೆಯನ್ನು ಸಂಪೂರ್ಣ ಧಾರ್ಮಿಕ ಸಂಪ್ರದಾಯಗಳ ಪ್ರಕಾರವೇ ನಡೆಸಲಾಗಿದೆ. ಮದುವೆಯಾದ ಜೋಡಿಯ ಹೆಸರು ಮೊಹಮ್ಮದ್ ಕಲೀಮುಲ್ಲಾ ನೂರಾನಿ ಮತ್ತು ರೇಷ್ಮಾ ಪರ್ವೀನ್. ರೇಷ್ಮಾ ಪರ್ವೀನ್ ಅಮಾಸ್ ಬ್ಲಾಕ್ನ ಹಮ್ಜಾಪುರ ವಾರ್ಡ್ ಸಂಖ್ಯೆ 11 ರ ಇಸ್ಲಾಂನಗರದ ನಿವಾಸಿ. 70 ವರ್ಷದ ಕಲೀಮುಲ್ಲಾ ನೂರಾನಿ ಬೈಡಾ ಗ್ರಾಮದ ನಿವಾಸಿ. ಇಬ್ಬರೂ ತಮ್ಮ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದಾರೆ. ಆದಾಗ್ಯೂ, ಕಲೀಮುಲ್ಲಾ ತನಗಿನ್ನೂ ವಯಸ್ಸ 50 ಎಂದು ಹೇಳುತ್ತಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ
ಮದುಗೆ ಆದ ವಿಚಾರದ ಬಗ್ಗೆ ಕಲೀಮುಲ್ಲಾನನ್ನು ಮಾತನಾಡಿಸಿದಾಗ, ನನ್ನದೇನೂ ತಪ್ಪಿಲ್ಲ. ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾನೆ. ಮದುವೆಗೆ ವಯಸ್ಸು ಲೆಕ್ಕವೇ ಅಲ್ಲ. ಹುಡುಗಿ ಕೂಡ ಈ ಮದುವೆಗೆ ಸಂತೋಷದಿಂದ ಒಪ್ಪಿಕೊಂಡಿದ್ದಾಳೆ. ಇದನ್ನು ಅವರು ಮಾಧ್ಯಮಗಳ ಮುಂದೆಯೂ ಹೇಳಿದ್ದಾಳೆ ಎಂದು ಸಮರ್ಥಿಸಿಕೊಂಡಿದ್ದಾನೆ. ಕಲೀಮುಲ್ಲಾ ವೃದ್ಧಾಪ್ಯದಲ್ಲಿ ಏಕೆ ವಿವಾಹವಾಗಿದ್ದೇನೆ ಎಂಬುದಕ್ಕೆ ಕಾರಣ ಕೊಟ್ಟಿದ್ದಾರೆ. ಮದುವೆಗೆ ಯಾವುದೇ ವಯಸ್ಸು ಇಲ್ಲ. ನನ್ನನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ನಾನು ಮದುವೆಯ ಬಗ್ಗೆ ಯೋಚಿಸಿದೆ. ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ