ಜುಲೈ 30 ರಂದು ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ 360 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ತಮಿಳು ನಟ ಧನುಷ್ ಕೂಡ ವಾಯನಾಡಿನ ಸಂತ್ರಸ್ತರಿಗೆ ಭಾರೀ ದೇಣಿಗೆ ಘೋಷಿಸಿದ್ದಾರೆ. ಹೌದು ಜುಲೈ 30 ರಂದು ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ 360 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಜನರು ಕಳೆದುಕೊಂಡರು. ಭಾರತೀಯ ಸೇನೆಯು ವಯನಾಡಿನಲ್ಲಿ ಕೆಲ ದಿನಗಳಿಂದ ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ.
ವಯನಾಡಿನ ದುರಂತಕ್ಕೆ ಸೌತ್ ನಟ, ನಟಿಯರು ದೇಣಿಗೆ ನೀಡುವ ಮೂಲಕ ಸಂತ್ರಸ್ಥರ ಸಹಾಯಕ್ಕೆ ನಿಂತಿದ್ದಾರೆ. ಈಗ ಕಾಲಿವುಡ್ ನಟ ಧನುಷ್ ಕೂಡ ಕೇರಳದ ಸಿಎಂ ಫಂಡ್‌ಗೆ 25 ಲಕ್ಷ ರೂ. ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ನಟನ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.ಅಂದಹಾಗೆ, ವಯನಾಡು ದುರಂತದಿಂದ ಸಂಕಷ್ಟದಲ್ಲಿರುವವರಿಗೆ ಈಗಾಗಲೇ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್, ಮೆಗಾಸ್ಟಾರ್ ಚಿರಂಜೀವಿ ಕುಟುಂಬ, ಸೂರ್ಯ ದಂಪತಿ, ಚಿಯಾನ್ ವಿಕ್ರಮ್ ಸೇರಿದಂತೆ ಅನೇಕರು ದೇಣಿಗೆ ನೀಡಿದ್ದಾರೆ.