ಹುಬ್ಬಳ್ಳಿ ಭೀಕರ ರಸ್ತೆ ಅಪಘಾತ ಪ್ರಕರಣ..ಮೃತರ ಅಂತ್ಯಕ್ರಿಯೆಯಲ್ಲಿ ಗವಿಸಿದ್ದೇಶ್ವರ ಅಭಿನವ ಶ್ರೀ ಭಾಗಿ.
ಕೊಪ್ಪಳ:-ನಿನ್ನೆ ರಾತ್ರಿ ಹುಬ್ಬಳ್ಳಿಯ ಹೆಬ್ಬಸೂರ ಗ್ರಾಮದ ಬಳಿ ಓಮಿನಿ ವಾಹನ ಮತ್ತು ಲಾರಿ ಮಧ್ಯ ಭೀಕರ ಅಪಘಾತವಾಗಿ ಕೊಪ್ಪಳ ತಾಲೂಕಿನ ಮಂಗಳಾಪೂರ ಗ್ರಾಮದ ಒಂದೇ ಕುಟುಂಬದ ಮೂರು ಜನ ಸಾವನ್ನಪಿದ ಸುದ್ದಿ ಕೇಳಿ ಮೃತರ ಅಂತ್ಯಕ್ರಿಯಲ್ಲಿ ಅಭಿನವಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಭಾಗವಹಿಸಿ ನಂತರ ಅವರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಹೌದು ನಿನ್ನೆ ಮದ್ಯ ರಾತ್ರಿ ಹುಬ್ಬಳ್ಳಿ ಸಮೀಪ ಕಿರೇಸೂರ ಬಳಿ ನಡೆದ ಭೀಕರ ಅಪಘಾತ ಪ್ರಕರಣದಲ್ಲಿ ಅಜ್ಜ,ಅಪ್ಪ,ಮೊಮ್ಮಗ ಪ್ರಾಣ ಕಳೆದುಕೊಂಡ ಧಾರುಣ ಘಟನೆಯ ನಡೆದಿತ್ತು.
ಅಪ್ಪ ಜಾಫರಸಾಬ ಮಂಗಳೂರ ಅವನಿಗೆ ಕೆಲ ದಿನಗಳ ಹಿಂದೆ ಲಕ್ವಾ (ಪಾರ್ಸಿ) ಹೊಡೆದಿತ್ತು.ಅಪ್ಪನಿಗೆ ಔಷಧ ಕೊಡಿಸಲು ಕಾರವಾರದ ಹತ್ತಿರ ಹಲಗಾ ಗ್ರಾಮಕ್ಕೆ ಮಗ ಮುಸ್ತಫಾ ಕರೆದುಕೊಂಡು ಹೋಗಿದ್ದರು.ಜೊತೆಗೆ ಮೊಮ್ಮಗ ಶೋಹೆಬ್ ನನ್ನು ಕರೆದುಕೊಂಡು ಹೋಗಿದ್ದರು.
ಹಲಗಾ ಗ್ರಾಮದಲ್ಲಿ ಅಪ್ಪನಿಗೆ ಔಷಧ ಕೊಡಿಸಿಕೊಂಡು ವಾಪಸ್ಸು ಕೊಪ್ಪಳ ಕಡೆ ಹೊರಟವರು ಹೆಬಸೂರಲ್ಲಿ ಸಂಬಂಧಿಕರನ್ನು ಭೇಟಿಯಾಗಿ ಹೋಗೋಣ ಅಂತಾ ಹೊರಟಿದ್ದರು.ಇನ್ನೊಂದು ಹತ್ತು ನಿಮಿಷ ಆಗಿದ್ದರೆ ಹೆಬಸೂರ ಗ್ರಾಮದ ಸಂಭಂಧಿಕರ ಮನೆ ತಲುಪುತ್ತಿದ್ದರು.ಆದರೆ ವಿಧಿಯಾಟ ಅವರನ್ನು ಕಿರೇಸೂರ ಬಳಿಯೇ ಕರೆದುಕೊಂಡಿತ್ತು.