ಫೈರ್ ಫ್ಲೈ ಶೂಟಿಂಗ್ ಮುಕ್ತಾಯ: ಹೊಸದೊಂದು ಪಯಣ ಆರಂಭವಾದಂತಿದೆ ಎಂದ ಶಿವಣ್ಣ ಪುತ್ರಿ

Share to all

ಶಿವರಾಜ್‌ಕುಮಾರ್‌ ಅವರ ಪುತ್ರಿ ನಿವೇದಿತಾ ನಿರ್ಮಾಣ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಫೈರ್‌ ಫ್ಲೈ’ ಚಿತ್ರೀಕರಣ ಮುಕ್ತಾಯಗೊಂಡಿದೆ. ಫೈರ್ ಪ್ಲೈ ಶೂಟಿಂಗ್ ಜರ್ನಿಯ ಝಲಕ್ ನ್ನು ಚಿತ್ರತಂಡ ಹಂಚಿಕೊಂಡು, ಕುತೂಹಲವನ್ನು ದುಪ್ಪಟ್ಟು ಮಾಡಿದೆ.ಫೈರ್ ಫ್ಲೈ ಪಯಣದ ಬಗ್ಗೆ‌ ನಿವೇದಿತಾ ಶಿವರಾಜ್ ಕುಮಾರ್ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಚಿಕ್ಕವಳಿದ್ದಾಗಿನಿಂದಲೂ ಸಿನೆಮಾ ಮತ್ತು ಕಥೆಗಳೊಡನೆ ಬೆಳೆದವಳು ನಾನು ಅಂದಿನಿಂದಲೂ ನನಗಿಷ್ಟವಾದ ಕಥೆಗಳನ್ನು ಬೆಳ್ಳಿತೆರೆಯ ಮೇಲೆ ತರಬೇಕೆಂದು ಕಂಡ ಕನಸಿಗೆ ಕಟ್ಟಿದ ಮೊದಲ ರೆಕ್ಕೆ “ಫೈರ್ ಪ್ಲೈ”. ಫೈರ್ ಫ್ರೈ ಚಿತ್ರೀಕರಣ ಇನ್ನೇನು ಮುಗಿಯುತ್ತಿರಲು, ಚಿತ್ರ ತಂಡದ ನಾವಿಕರಾದ ವಂಶಿ, ನಮ್ಮ ತಂತ್ರಜ್ಞರು, ಹಿರಿಯ ನಟ ನಟಿಯರು. ಅತ್ಯದ್ಭುತ ಪ್ರತಿಭೆಗಳು ಹಾಗೂ ನನ್ನ ಬೆನ್ನೆಲುಬಾಗಿ ನಿಂತ ತಂಡದ ಪ್ರತಿಯೊಬ್ಬರೂ ಹಾಗೂ ಅವರೊಡನೆ ಮೂಡಿದ ನೆನಪುಗಳು ನನ್ನಲ್ಲಿ ಶಾಶ್ವತವಾಗಿ ಉಳಿಯುವುದು.

ಶುರುವಾದ ಪ್ರತಿಯೊಂದು ಪ್ರಯಾಣವು ಎಲ್ಲಾದರೂ ಅಂತ್ಯಗೊಳ್ಳಬೇಕೆನ್ನುತ್ತಾರೆ. ಆದರೆ ನನ್ನ ಈ ಕನಸಿನ ಪ್ರಯಾಣದ ಕೊನೆ ಹತ್ತಿರವಾಗುತ್ತಿದ್ದರೂ ಹೊಸತೊಂದು ಪ್ರಯಾಣದ ಆರಂಭವಾದಂತಿದೆ. ಅಂತರಾಳದ ಬೆಳಕಿನ ಹುಡುಕಾಟದ ಕಥೆಯಾಗಿರುವ ನಮ್ಮ “ಫೈರ್ ಪ್ಲೈ” ಚಿತ್ರವನ್ನು ನಿಮ್ಮೊಂದಿಗೆ ತೆರೆಯ ಮೂಲಕ ಹಂಚಿಕೊಳ್ಳಲು ಕಾತುರದಿಂದ ಕಾಯುತ್ತಿರುವೆ ಎಂದು ಪತ್ರದ ಮೂಲಕ ಮನದ ಮಾತು ಹಂಚಿಕೊಂಡಿದ್ದಾರೆ.

ಯುವ ಪ್ರತಿಭೆ ವಂಶಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶಕನಾಗಿಯೂ ಬಣ್ಣ ಹಚ್ಚಿರುವ ಫೈರ್ ಫ್ಲೈ ನಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್, ಶೀತಲ್ ಶೆಟ್ಟಿ ಹಿರಿಯ ಕಲಾವಿದ ಮೂಗು ಸುರೇಶ್ ಅಭಿನಯಿಸಿದ್ದಾರೆ. ವಂಶಿಗೆ‌ ಜೋಡಿಯಾಗಿ ರಚನಾ ಇಂದರ್ ಸಾಥ್ ಕೊಟ್ಟಿದ್ದಾರೆ.ಚಿತ್ರಕ್ಕೆ ಅಭಿಲಾಷ್ ಕಳತ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಘು ನಿಡುವಳ್ಳಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ನಾಯಕ- ನಿರ್ದೇಶಕ ವಂಶಿಗೆ ಇಲ್ಲಿ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡುತ್ತಿದೆ.


Share to all

You May Also Like

More From Author