ಬೆಂಗಳೂರು: ದರ್ಶನ್ ಅಂಡ್ ಗ್ಯಾಂಗ್ನ ಕ್ರೈಮ್ ರೆಕಾರ್ಡ್ ಅನ್ನ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 85 ದಿನಗಳ ಬಳಿಕ ದೋಷಾರೋಪ ಪಟ್ಟಿಯನ್ನ ನೀಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ರಿಯಾಕ್ಟ್ ಮಾಡಿದ್ದಾರೆ. ಮಾನವೀಯತೆಯಿಂದ ನೋಡೋದಾದ್ರೆ ಮಾಡಿದ್ದು ಖಂಡಿತಾ ತಪ್ಪು. ದರ್ಶನ್ ಪ್ರಕರಣದ ಕುರಿತು ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ ಸತ್ಯಾಸತ್ಯತೆ ಆಚೆ ಬರುತ್ತದೆ. ಇನ್ನೂ ನಾನು ಯಾರ ಶೋಲ್ಡರ್ ಮೇಲೂ ಗನ್ ಇಟ್ಟು ಹೊಡಿಯೋಕೆ ಹೋಗಲ್ಲ. ಏನೇ ಇದ್ದರೂ ನೇರಾನೇರ ಮಾತನಾಡುತ್ತೇನೆ ಎಂದಿದ್ದಾರೆ.
ನನಗೆ ಬಗ್ಗೆ ಯಾರೋ ಕಾಮೆಂಟ್ ಮಾಡಿದರು. ನಾನು ಹೋಗಿ ದೂರು ಕೊಟ್ಟೆ ಅಷ್ಟೇ. ಒಂದು ಹಾಳೆ ಪೆನ್‌ನಲ್ಲಿ ಆಗುವ ಕೆಲಸವಿದು. ನಾನು ಸಾಧಿಸೋಕೆ ಅಂತ ಹುಟ್ಟಿದ್ದೀವಿ ಸಾಯೋದಕ್ಕೆ ಅಲ್ಲ. ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ಬಂದಿದ್ದೇನೆ. ಚಾಮುಂಡೇಶ್ವರಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ ಮಾಡಿಲ್ಲ ಅಂದರೆ ಆಚೆ ಬರಲಿ. ಕಾಮೆಂಟ್ ಮಾಡಿದ ಅನ್ನೋ ವಿಚಾರಕ್ಕೆ ಹೀಗೆ ಕ್ರೌರ್ಯ ಮಾಡಿರೋದ್ರಿಂದ ಎಷ್ಟು ಕುಟುಂಬ ಇಂದು ಅನಾಥವಾಗಿದೆ. ದರ್ಶನ್ ನನಗೆ ವೈರಿಯಂತಲ್ಲ. ಅವರ ಮೇಲೆ ವೈಯಕ್ತಿಕ ದ್ವೇಷವಿಲ್ಲ ಎಂದು ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದರು.