BBK11: ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್ ನಲ್ಲಿ ಕಿರಿಕ್: ಗೋಲ್ಡ್ ಸುರೇಶ್ʼಗೆ ಶಾಪ ಹಾಕಿದ ಅನುಷಾ, ಯಾಕೆ!?

Share to all

ಆ ಪಾಪ ನಿನ್ನ ಗ್ಯಾರಂಟಿ ಸುಮ್ನೆ ಬಿಡಲ್ಲ ಎಂದು ಹೇಳುವ ಮೂಲಕ ಗೋಲ್ಡ್​ ಸುರೇಶ್​ಗೆ ಅನುಷಾ ಶಾಪ ಹಾಕಿದ್ದಾರೆ.ನಿನ್ನೆ ಬಿಗ್​ಬಾಸ್​ ಕೊಟ್ಟ ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್​ನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ಆಗ ಗೋಲ್ಡ್​ ಸುರೇಶ್​ ತಮ್ಮ ಡ್ರಮ್‍ ಬಳಿ ಬಂದ ಸ್ಪರ್ಧಿಗಳಿಗೆ ಗುದ್ದಿ ತಳ್ಳಿದ್ದಾರೆ. ಅದೇ ಜಾಗದಲ್ಲಿದ್ದ ಅನುಷಾ ಅವರಿಗೆ ಪೆಟ್ಟಾಗಿದೆ. ಆಗ ಕೋಪಗೊಂಡ ಅನುಷಾ, ಒಂದು ಕಾಮನ್​ಸೆನ್ಸ್ ಇಲ್ಲೂ ಹೇಗೆ ವರ್ತನೆ ಮಾಡಬೇಕು ಅಂತ, ಹೀಗೆಂನಾ ನಿಮ್ಮ ಮನೆಯಲ್ಲಿ ಬೇಳ್ಸಿದ್ದು ಅಂತ ಹೇಳಿದ್ದಾರೆ. ಇದಾದ ಬಳಿಕ ಕೈಯಲ್ಲಿ ಎಳೆಯೋದಕ್ಕೆ ಬಂದರೆ ಕಾಲಲ್ಲಿ ಒದೆಯುತ್ತಾರೆ. ನನ್ನನ್ನೂ ಅವರ ಅಪ್ಪ ಸಾಕ್ತಾನಾ ಅಂತ ಕೂಗಾಡಿದ್ದಾರೆ. ಮತ್ತೆ ಇದೇ ವಿಚಾರಕ್ಕೆ ಟಾಸ್ಕ್​ ಮುಗಿದ ಬಳಿಕ ಗಲಾಟೆಯಾಗಿದೆ.

ಇನ್ನೂ, ಬಿಗ್​ಬಾಸ್​ ಮನೆಯ ಎಲ್ಲ ಸ್ಪರ್ಧಿಗಳಿಗೆ ದೊಡ್ಡ ಅವಕಾಶವೊಂದನ್ನು ಕೊಟ್ಟಿದ್ದಾರೆ. ಹೀಗಾಗಿ ನಾಲ್ಕು ತಂಡವನ್ನು ರಚಿಸಿದ ಬಿಗ್​ಬಾಸ್​ ಈ ಟಾಸ್ಕ್​ಗಳನ್ನು ನೋಡಿದ್ದಾರೆ. ಟಾಸ್ಕ್​ ಗೆದ್ದ ತಂಡಕ್ಕೆ ಬಿಗ್​ಬಾಸ್​ ಮನೆಯಲ್ಲಿರೋ ಅಧಿಕಾರವನ್ನು ಏಕಾಕಾಲದಲ್ಲಿ ಪಡೆಯಲು, ಅನುಭವಿಸಲು ಹಾಗೂ ಈ ಮನೆಯ ಮೇಲಿನ ಅಧಿಕಾರವನ್ನು ಸಾಧಿಸಲು ಒಂದೇ ವಾರದಲ್ಲಿ ಅನುಭವಿಸಬಹುದಾಗಿದೆ.


Share to all

You May Also Like

More From Author