ಆಘಾತಕಾರಿ ಘಟನೆ: ಆಸ್ಪತ್ರೆ ಮಹಿಳಾ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ವಾರ್ಡ್ ಬಾಯ್ ಅಂದರ್!

Share to all

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ಆಸ್ಪತ್ರೆಯ ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ವಾರ್ಡ್​ಬಾಯ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಯಲ್ಲಾಲಿಂಗ ಬಂಧಿತ ಆರೋಪಿ. ತಿಲಕನಗರದ ಆಸ್ಪತ್ರೆಯಲ್ಲಿ ವಾರ್ಡ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.ಅಕ್ಟೋಬರ್ 31 ರಂದು ಬೆಳಗ್ಗೆ 8.20ರ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ವಾಶ್​ರೂಂನ ಕಿಟಕಿಯ ಮೇಲೆ ಮೊಬೈಲ್​ ಇರುವುದನ್ನು ಕಂಡರು. ಅದನ್ನು ಅನ್​ಲಾಕ್ ಮಾಡಿದ ಬಳಿಕ ಹಲವು ರೆಕಾರ್ಡಿಂಗ್ಸ್​ಗಳನ್ನು ನೋಡಿ ಗಾಬರಿಗೊಂಡಿದ್ದರು.

ಅವಳು ಹೊರಗೆ ಬಂದಾಗ ಯಲ್ಲಾಲಿಂಗ ಆ ಫೋನ್​ ನನ್ನದು ನನಗೆ ವಾಪಸ್ ಕೊಡು ಎಂದು ಕೇಳಿದ್ದಾನೆ, ಆದರೆ ಸಿಬ್ಬಂದಿ ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ತಿಲಕನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಕಾಯ್ದೆಯ ಸೆಕ್ಷನ್ 77 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಕುರಿತು ಕೇಳಿದಾಗ ತಪ್ಪಾಗಿ ತನ್ನ ಮೊಬೈಲ್​ನ್ನು ವಾಶ್​ರೂಂನಲ್ಲಿ ಇರಿಸಿರುವುದಾಗಿ ತಿಳಿಸಿದ್ದಾನೆ.

ಆದರೆ ಅಲ್ಲಿರುವ ರೆಕಾರ್ಡಿಂಗ್​ಗಳು ವಿಭಿನ್ನ ಕಥೆಯನ್ನೇ ಹೇಳುತ್ತಿವೆ. ಯಲ್ಲಾಲಿಂಗ ಅವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


Share to all

You May Also Like

More From Author