ಕಿರುತೆರೆಯ ಚೆಂದದ ನಟಿ ಚಂದನಾ ಅನಂತಕೃಷ್ಣ. ಗೊಂಬೆಯಂತಿರೋ ಈ ನಟಿಗೆ ವಿಕೇಂಡ್ನಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಶೋಗೆ ಅವಕಾಶ ಸಿಕ್ಕಿತ್ತು. ಕಿರುತೆರೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ನಟಿ ಚಂದನ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಹತ್ತಿದ್ದರು. ಡ್ಯಾನ್ಸ್ ಕೋರಿಯೋಗ್ರಾಫರ್ ರುದ್ರಾ ಅವರಿಗೆ ಜೋಡಿಯಾಗಿ ಪ್ರತಿ ವಾರ ವಿಕೇಂಡ್ನಲ್ಲಿ ನಿಮ್ಮೆಲ್ಲರೆದುರು ಬಂದು ನಿಮ್ಮನ್ನ ರಂಜಿಸುತ್ತಿದ್ದರು. ಆದರೆ ಧಿಡೀರ್ ಅಂತಾ ಲಾಸ್ಟ್ ವೀಕ್ ಎಪಿಸೋಡ್ನಲ್ಲಿ ಚಂದನಾ ಅವರು ಈ ಶೋ ಕ್ವಿಟ್ ಮಾಡುತ್ತೇನೆ ಎಂದು ವೇದಿಕೆ ಮೇಲೆ ಅನೌನ್ಸ್ ಮಾಡಿದ್ದರು.
ಈಗ ಲಕ್ಷ್ಮೀ ನಿವಾಸ ಸೀರಿಯಲ್ ನಟಿ, ಬಿಗ್ಬಾಸ್ ಖ್ಯಾತಿಯ ಚಂದನಾ ಅನಂತಕೃಷ್ಣ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇದೇ ತಿಂಗಳು ನಟಿ ಚಂದನಾ ಅವರು ಸಪ್ತಪದಿ ತುಳಿಯುತ್ತಿದ್ದಾರೆ. ಇನ್ನೂ ನಟಿ ಚಂದನಾ ಅನಂತಕೃಷ್ಣ ಅವರು ಬಿಗ್ಬಾಸ್ ಸೀಸನ್-7, ಡ್ಯಾನ್ಸಿಂಗ್ ಚಾಂಪಿಯನ್, ಭರ್ಜರಿ ಬ್ಯಾಚುಲರ್ಸ್ ಶೋ ಸ್ಪರ್ಧಿ ಕೂಡ ಆಗಿದ್ದರು. ಹಾಡು ಕರ್ನಾಟಕ ಸಿಂಗಿಂಗ್ ಶೋನಲ್ಲಿ ಚಂದನಾ ಆ್ಯಂಕರ್ ಆಗಿದ್ದರು.
ರಾಜಾರಾಣಿ, ಹೂಮಳೆ ಸೀರಿಯಲ್ನಲ್ಲಿ ನಟಿಸಿದ್ದ ನಟಿ ಚಂದನಾ ಅವರು ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಗಾಯನದ ಮೂಲಕ ರಂಜಿಸಿರುವ ನಟಿ ಚಂದನಾ ಅನಂತಕೃಷ್ಣ ಅವರು ಪ್ರತ್ಯಕ್ಷ್ ಎಂಬುವವರ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನೂ ನಟಿ ಮದುವೆಯಾಗುತ್ತಿರೋ ಹುಡುಗ ಏನೂ ಕೆಲಸ ಮಾಡುತ್ತಾರೆ? ಮದುವೆ ಯಾವಾಗ ಎಂಬ ವಿಚಾರದ ಬಗ್ಗೆ ನಟಿ ಹೇಳಬೇಕಿದೆ