ಶಿಗ್ಗಾಂವ ಉಪಚುನಾವಣೆ.. ಮಾಜಿ ಸಚಿವ ವಿನಯ ಕುಲಕರ್ಣಿ ಪುತ್ರಿಗೆ ಪೈನಲ್ ಆದ ಕಾಂಗ್ರೆಸ್ ಟಿಕೆಟ್..!!!..ವಿಕೆ ಬಾಸ್ ಪುತ್ರಿ ವೈಶಾಲಿ ಕುಲಕರ್ಣಿ ರಾಜಕೀಯಕ್ಕೆ ಎಂಟ್ರಿ.
ಶಿಗ್ಗಾಂವ:- ಶಿಗ್ಗಾಂವ ಉಪ ಚುನಾವಣೆಯ ಕಣ ರಂಗೇರುವಂತಾಗಿದೆ.ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಬಿಜೆಪಿ ಟಿಕೆಟ್ ಅನ್ನು ಈಗಾಗಲೇ ಘೋಷಣೆ ಮಾಡಿದೆ.ಅದರ ಬೆನ್ನಲ್ಲೇ ಕಾಂಗ್ರೆಸ್ ಅಳೆದು ತೂಗಿ ಲಿಂಗಾಯತ ಟ್ರಂಪ್ ಕಾಡ್೯ನ್ನು ಶಿಗ್ಗಾಂವ ಕ್ಷೇತ್ರದಲ್ಲಿ ಬಳಸಿಕೊಳ್ಳಲು ಸಜ್ಜಾಗಿದೆ.
ಆ ಹಿನ್ನೆಲೆಯಲ್ಲಿ ಧಾರವಾಡ ಮಾಜಿ ಸಚಿವ ವಿನಯ ಕುಲಕರ್ಣಿ ಪುತ್ರಿ ವೈಷಾಲಿ ಕುಲಕರ್ಣಿ ಅವರಿಗೆ ಕಾಂಗ್ರೆಸ್ ಟಿಕೆಟ್ ಪೈನಲ್ ಮಾಡಿದ್ದು ಘೋಷಣೆ ಒಂದೇ ಬಾಕಿ ಇದೆ.
ವಿನಯ ಕುಲಕರ್ಣಿ ನಂತರ ಅವರ ಕುಟುಂಬದಲ್ಲಿ ಮಹಿಳೆಯೊಬ್ಬರು ರಾಜಕೀಯ ಎಂಟ್ರಿ ಪಡೆದಂತಾಗಿದೆ.
ವೈಷಾಲಿ ಕುಲಕರ್ಣಿ ಕೂಡಾ ತಂದೆಯಂತೆ ಬಿಎಸ್ ಸಿ ಅಗ್ರಿಯಲ್ಲಿ ಪದವಿ ಪಡೆದಿದ್ದು ಅಲ್ಲದೇ ವನ್ಯಜೀವಿ ಮಂಡಳಿಯ ಸದಸ್ಯೆಯಾಗಿ ಕೂಡಾ ನೇಮಕಗೊಂಡಿದ್ದಾರೆ.