ಆತ್ಮಹತ್ಯೆ ಪ್ರಕರಣದಲ್ಲಿ ನಮ್ಮ ಪೋಲೀಸರ ಹೆಸರು ಕೇಳಿ ಬಂದಿದೆ.ಆಪೀಸಸ್೯ ವಿರುದ್ಧ ತನಿಖೆ ಮಾಡ್ತೇವಿ.ಕಮೀಷನರ್ ಹೇಳಿಕೆ.

Share to all

ಆತ್ಮಹತ್ಯೆ ಪ್ರಕರಣದಲ್ಲಿ ನಮ್ಮ ಪೋಲೀಸರ ಹೆಸರು ಕೇಳಿ ಬಂದಿದೆ.ಆಪೀಸಸ್೯ ವಿರುದ್ಧ ತನಿಖೆ ಮಾಡ್ತೇವಿ.ಕಮೀಷನರ್ ಹೇಳಿಕೆ.

ಹುಬ್ಬಳ್ಳಿ
ಪೊಲೀಸರು ಹಾಗೂ ಪತ್ನಿಯಿಂದ ಮಾನಸಿಕ ಕಿರುಕುಳದಿಂದ ಯುವಕ ಆತ್ಮಹತ್ಯೆ ಪ್ರಕರಣ..

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 8 ಜನರ ವಿರುದ್ದ ಕೇಸ್ ದಾಖಲಾಗಿದೆ ಎಂದು
ಹುಬ್ಬಳ್ಳಿಯಲ್ಲಿ ಹುಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದ್ದಾರೆ.
ಪ್ರಕರಣದಲ್ಲಿ ಪೊಲೀಸರ ಹೆಸರು ಕೇಳಿ ಬಂದಿದೆ.
ಹೀಗಾಗಿ ನಾವು ಪೊಲೀಸರ ವಿರುದ್ದ ಪ್ರತ್ಯೇಕ ವಿಚಾರಣೆ ಮಾಡುತ್ತೇವೆ.

ನಿನ್ನೆ ಹುಬ್ಬಳ್ಳಿಯ ಕೋಟೆ ಲಿಂಗೇಶ್ವರ ಏರಿಯಾದಲ್ಲಿ 28 ವರ್ಷದ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದ.ಮನೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸರು ಸಂಧಾನಕ್ಕೆ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು ಅನ್ನೋ ಆರೋಪ ಕೇಳಿ ಬಂದಿತ್ತು.

ಮಾನಸಿಕ ಕಿರುಕುಳದಿಂದ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದ.
ಆತ್ಮಹತ್ಯೆ ಬೆನ್ನಲ್ಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೇಶ್ವಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಾತೇನಹಳ್ಳಿ ASI ಜಯಶ್ರೀ ಚಲವಾದಿ,ನಿಖಿಲ್ ಪತ್ನಿ ಸೇರಿ 8 ಜನರ ವಿರುದ್ದ ದೂರು ದಾಖಲಾಗಿದೆ.

ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಮಹಿಳೆಯೂ ಒಂದು ಕೇಸ್ ದಾಖಲಿಸಿದ್ರು.
ಹೀಗಾಗಿ ನಾವು ನಿಖಿಲ್ ಕುಟುಂಬಕ್ಕೆ ಠಾಣೆಗೆ ಬಂದು ಹಾಜರಾಗುವಂತೆ ಸೂಚಿಸಿತ್ತು.
ಎರಡೂ ಕುಟುಂಬಕ್ಕೆ ಪೊಲೀಸರು ನೋಟಿಸ್ ಕೊಟ್ಟಿದ್ರು.ಆ ವೇಳೆ ಎರಡು ಕುಟುಂಬದವರು ನಾವು ಬಗೆ ಹರಿಸಿಕೊಳ್ತೀವಿ ಎಂದು ಕೈ ಬರಹದಲ್ಲಿ ಬರೆದುಕೊಟ್ಟಿದ್ರು.
ಆದ್ರೆ ನಿನ್ನೆ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿಖಿಲ್ ಕುಟುಂಬಸ್ಥರು ಯಾರ ವಿರುದ್ದ ದೂರು ಕೊಟ್ಡಿದಾರೆ ಅವರ ದೂರಿನ ಅನ್ವಯ ನಾವು FIR ಮಾಡಿದ್ದೇವೆ.
ಅವರ ಯಾರ ಹೆಸರು ಹೇಳಿದ್ದಾರೋ,ಯಥಾವತ್ತಾಗಿ FIR ದಾಖಲಿಸಿದ್ದೇವೆ.
FIR ಆದ ಬಳಿಕ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿರೋ ವಿಚಾರ ತನಿಖೆ ಆಗಬೇಕು.ಸ್ಟೇಶನ್ ರೆಕಾರ್ಡ್ ಗಳನ್ನು ಚೆಕ್ ಮಾಡ್ತೀವಿ ಎಂದ ರೇಣುಕಾ ಸುಕುಮಾರ.

ಪೊಲೀಸ್ ಸಿಬ್ಬಂದಿ ಹೆಸರು ಕೇಳಿ ಬಂದಿರೋ ಕಾರಣಕ್ಕೆ ನಾವು ಪ್ರತ್ಯೇಕ ತನಿಖೆ ಮಾಡುತ್ತೇವೆ.
ಆಪೀಸರ್ಸ್ ವಿರುದ್ದ ಡಿಪಾರ್ಟಮೆಂಟ್ ತನಿಖೆ ಮಾಡ್ತೀವಿ ಎಂದ ಕಮೀಷನರ್..

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author