ಅನುಷಾ ರೈ ಲವ್ ಬ್ರೇಕಪ್ ಆಗಿದ್ದು ಅದೊಂದೇ ಕಾರಣ!? ಎಳೆ ಎಳೆಯಾಗಿ ಬಿಚ್ಚಿಟ್ಟ ಬಿಗ್ ಬಾಸ್ ಸ್ಪರ್ಧಿ!

Share to all

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 51ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಕಳೆದ ಸಂಚಿಕೆಯಲ್ಲಿ ಬಿಗ್​ಬಾಸ್​ ಮನೆಯಿಂದ ಸ್ಯಾಂಡಲ್​ವುಡ್​ ನಟಿ ಅನುಷಾ ರೈ ಅವರು ಆಚೆ ಬಂದಿದ್ದರು. ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಕೂಡಲೇ ಬೇಸರಗೊಂಡು ವೇದಿಕೆ ಮೇಲೆ ಕಣ್ಣೀರು ಹಾಕಿದ್ದರು. ಇದೀಗ ಬಿಗ್​ಬಾಸ್​ನಿಂದ ಆಚೆ ಬಂದ ಕೂಡಲೇ ತಮ್ಮ ಹಿಂದಿನ ಬ್ರೇಕಪ್ ಲವ್ ಸ್ಟೋರಿ ಹೇಳಿಕೊಂಡಿದ್ದಾರೆ. ಈ ವಾರ ಬಿಗ್ ಬಾಸ್​ ಮನೆಯಿಂದ ಅನುಷಾ ರೈ ಔಟ್​ ಆಗಿದ್ದು, ಕಣ್ಣೀರು ಹಾಕುತ್ತಾ ಅನುಷಾ ರೈ ದೊಡ್ಮನೆಯಿಂದ ಹೊರಗೆ ಹೋಗಿದ್ದಾರೆ.

ದೊಡ್ಮನೆಯಿಂದ ಹೊರ ಬಂದ ಬಳಿಕ ನಟಿ ಅನುಷಾ ರೈ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಈ ವೇಳೆ ತಮ್ಮ ಮೊದಲ ಪ್ರೀತಿ ಹಾಗೂ ಬ್ರೇಕಪ್‌ ಬಗ್ಗೆ ಮಾತನಾಡಿದ್ದಾರೆ.

ದೇವರಾಣೆ ನನಗೆ ಕ್ರಶ್‌ ಎನ್ನುವುದು ಆಗಿಲ್ಲ. ನನಗೆ ಯಾರನ್ನ ನೋಡಿ ಸಹ ಕ್ರಶ್ ಅಂತಾ ಅನಿಸಿಲ್ಲ. ಕ್ರಶ್‌ ಅಂತೆಲ್ಲಾ ಆ ರೀತಿ ಎಲ್ಲಾ ಗೊತ್ತಾಗುತ್ತಿರಲಿಲ್ಲ. ಆ ರೀತಿ ಭಾವನೆಗಳೆಲ್ಲಾ ಇರಲಿಲ್ಲ. ಆದರೆ ಓದು ಮುಗಿಲು ಇನ್ನೂ ಒಂದು ವರ್ಷ ಇದ್ದಾಗ ಒಬ್ಬ ಇಷ್ಟ ಆದ’ ಎಂದು ನಟಿ ಅನುಷಾ ರೈ ತಮ್ಮ ಮೊದಲ ಕ್ರಶ್ ಹಾಗೂ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

ಮೊದಲೆಲ್ಲಾ ತುಂಬಾ ಲವ್‌ ಪ್ರಪೋಸ್‌ ಬರುತ್ತಿತ್ತು. ಆದರೆ ಈಗ ಯಾರೂ ಮಾಡುತ್ತಿಲ್ಲ. ಈಗ ಲವ್‌ ಮಾಡಬೇಕು ಅನಿಸುತ್ತಿದೆ. ಆದರೆ ಈಗ ಯಾರೂ ಪ್ರಪೋಸ್‌ ಮಾಡುತ್ತಿಲ್ಲ. ಆದರೆ ಕಾಲೇಜಿನಲ್ಲಿದ್ದಾಗ ತುಂಬಾ ಲವ್‌ ಪ್ರಪೋಸ್‌ಗಳು ಬರುತ್ತಿದ್ದವು. ಅದು ಅಸಲಿನೋ ನಕಲಿನೋ ನನಗಂತೂ ಗೊತ್ತಿಲ್ಲ. ತುಂಬಾ ಪ್ರಪೋಸ್‌ಗಳು ಬರುತ್ತಿದ್ದವು’ ಎಂದರು.

ಒಬ್ಬ ಪ್ರಪೋಸ್ ಮಾಡಿದ, ಅವನು ಊಹಿಸೋಕು ಆಗದೇ ಇರುವ ತರ ಟಾರ್ಚರ್‌. ಅವನು ಸತ್ತು ಹೋಗುತ್ತೇನೆ ಅದು ಇದು ಅಂದಾಗ ನೋಡೋಣ ಅಂತಾ ಒಪ್ಪಿಕೊಂಡೆ. ಆಮೇಲೆ ಅವನು ಟಾರ್ಚರ್‌ ಶುರುವಾಯ್ತು. ನೀನು ಹಾಗೆ ಇರಬೇಡ, ಹೀಗೆ ಇರಬೇಡ, ವಾಟ್ಸಪ್‌ ಬಳಸಬೇಡ, ಏನೇನೋ ಹೇಳುತ್ತಿದ್ದ. ಹುಡುಗರ ಜೊತೆ ಎಲ್ಲಾ ಮಾತಡಬೇಡ ಅಂತಿದ್ದ. ಯಾಕೆ ಅವರ ಜೊತೆ ಇರುತ್ತೀಯಾ ಅಂತೆಲ್ಲಾ ಪ್ರಶ್ನೆ ಮಾಡುತ್ತಿದ್ದ. ನಾನು ಫ್ರೆಂಡ್ಸ್‌ ಜೊತೆ ಇರುವುದನ್ನೇ ಅವನು ಕೆಟ್ಟ ರೀತಿಯಲ್ಲಿ ಯೋಚನೆ ಮಾಡಿ ಜಗಳ ಮಾಡದ ಅದಕ್ಕೆ ಬಿಟ್ಟೆ. ನಿನ್ನ ಸಹವಾಸ ಬೇಡ. ಲವ್‌ ಬೇಡ ಏನೂ ಬೇಡ ಅಂತಾ ಬಿಟ್ಟೆ’ ಎಂದು ಅನುಷಾ ರೈ ಬ್ರೇಕಪ್‌ ಸ್ಟೋರಿ ಬಿಚ್ಚಿಟ್ಟಿದ್ದಾರೆ.

ಇನ್ನೂ ಬಿಗ್ ಬಾಸ್ ಕನ್ನಡ ಸೀಸನ್ 11ರ 50ನೇ ದಿನಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಿಗ್ ಬಾಸ್ ಮನೆಯಿಂದ ಅನುಷಾ ರೈ ಹೊರಬಿದ್ದಿದ್ದಾರೆ. ಇಬ್ಬರು ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ.


Share to all

You May Also Like

More From Author