ನಕಲಿ ಸಹಿ ವಿವಾದ: ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಸಿಪಿ ಯೋಗೇಶ್ವರ್ ಗೆ ಸಂಕಷ್ಟ!

Share to all

ರಾಮನಗರ:- ಇಡೀ ಕರ್ನಾಟಕವೇ ಹೆಚ್ಚು ಕುತೂಹಲದಿಂದ ಕಾದು ಕುಳಿತಿರುವ ಚನ್ನಪಟ್ಟಣ ಉಪ ಚುನಾವಣೆಯ ಫಲಿತಾಂಶ ಪ್ರಕಟಕ್ಕೆ ದಿನಗಣನೆ ಶುರುವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್, ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದ್ದಾರೆ. ಆದರೆ ಈ ಮಧ್ಯೆಯೇ ಸಿಪಿ ಯೋಗೇಶ್ವರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ

ಪುತ್ರ ಶ್ರವಣ್ ಅವರ ಸಹಿ ನಕಲು ಮಾಡಿದ ಆರೋಪದಡಿ ಸಿಪಿ ಯೋಗೇಶ್ವರ್ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ ಬುಧವಾರ ನಡೆದಿದೆ.

ಸಿಪಿ ಯೋಗೇಶ್ವರ ಅವರ ಮೊದಲ ಪತ್ನಿ ಮತ್ತು ಪುತ್ರ ಶ್ರವಣ್​ ಅವರು ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದರು. ಈ ಮನೆ ಸಿಪಿ ಯೋಗೇಶ್ವರ್ ಮೊದಲ ಪತ್ನಿ ಹಾಗೂ ಶ್ರವಣ್ ಹೆಸರಲ್ಲಿದೆ. ಶ್ರವಣ್ ಹಾಗೂ ಶ್ರವಣ್ ತಾಯಿ ಇಬ್ಬರೂ ಸೇರಿ ಮನೆಯನ್ನು ನಿಶಾಗೆ ಉಡುಗೊರೆಯಾಗಿ ನೀಡಿದ್ದಾರೆ.

ಆದರೆ, ಈ ಮನೆಯಲ್ಲಿ ತನಗೂ ಭಾಗ ಬೇಕು ಎಂದು ಸಿಪಿ ಯೋಗೇಶ್ವರ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಇಷ್ಟೇ ಅಲ್ಲದೇ, “ನಾನು ನನ್ನ ಅಕ್ಕನಿಗೆ ಮನೆ ಗಿಫ್ಟ್ ನೀಡಿಲ್ಲ. ಮನೆಯಲ್ಲಿ ನನಗೂ ಭಾಗ ಬೇಕು” ಅಂತ ಶ್ರವಣ್​ ಅವರ ಹೆಸರಿನಲ್ಲಿ ಸಿಪಿ ಯೋಗೇಶ್ವರ ಕೋರ್ಟ್​​ನಲ್ಲಿ ಅರ್ಜಿ ಹಾಕಿದ್ದಾರೆ. ಈ ಅರ್ಜಿಯಲ್ಲಿ ಶ್ರವಣ್​ ಅವರ ಸಹಿಯನ್ನು ಸಿಪಿ ಯೋಗೇಶ್ವರ್​ ಮಾಡಿದ್ದಾರೆ. ಹೀಗೆ, ಸಿಪಿ ಯೋಗೇಶ್ವರ್​ ಪುತ್ರ ಶ್ರವಣ ಅವರ ಸಹಿ ನಕಲು ಮಾಡಿದ್ದಾರೆ.

ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಮನೆಯಲ್ಲಿ ಭಾಗ ಬೇಕು ಅಂತ ನಾನು ಕೇಳಿಲ್ಲ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ” ಎಂದು ಶ್ರವಣ್​ ಹೇಳಿದ್ದಾರೆ.

ಈ ವಿಚಾರವಾಗಿ ಶ್ರವಣ ತಂದೆ ಸಿಪಿ ಯೋಗೇಶ್ವರ್​ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಇಬ್ಬರ ಸಂಭಾಷಣೆ ರೆಕಾರ್ಡ್​​ ಆಗಿದೆ. ಅದರಲ್ಲಿ, ಸಿಪಿ ಯೋಗೇಶ್ವರ್​ ಸಹಿ ನಕಲು ಮಾಡಿದ್ದಾನ್ನು ಒಪ್ಪಿಕೊಂಡಿದ್ದಾರೆ. ಸಿಪಿ ಯೋಗೇಶ್ವರ ಮತ್ತು ಶ್ರವಣ್​ ಮಾತನಾಡಿರುವ ಆಡಿಯೋ ಸಂಭಾಷಣೆ ವೈರಲ್​ ಆಗಿದೆ.


Share to all

You May Also Like

More From Author