ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಮುರಗೇಶ್ ನಿರಾಣಿ ಹೇಳಿಕೆ.
ಬಿಜೆಪಿ ರಾಜ್ಯಾಧ್ಯಕ್ಷ,ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿತ್ತು.ಇದೀಗ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ನಾನು ಸ್ವಾಗತ ಮಾಡ್ತೀನಿ ಎಂದ ಮುರುಗೇಶ್ ನಿರಾಣಿ.
ದೀಪಾವಳಿ ಉಡುಗೊರೆಯಾಗಿ ನಮಗೆ ವಿಜಯೇಂದ್ರ ಅವರನ್ನು ನಮಗೆ ಕೊಟ್ಟಿದೆ.ನಾವು ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡ್ತೀವಿ.ನಾವು ಮೂರನೇ ಸಲ ಮೋದಿ ಪ್ರಧಾನಿಯನ್ನು ಮಾಡಬೇಕಿದೆ.ನಾನು ಬಾಗಲಕೋಟ ಲೋಕಸಭೆ ಟಿಕೆಟ್ ಆಕಾಂಕ್ಷಿ ಅಲ್ಲ.
ಕೆಲ ಜನ ಅಸಮಾಧಾನ ಇರೋದು ಸಹಜ.
ಪ್ರತಿ ಕ್ಷೇತ್ರದಲ್ಲಿ ರಾಜ್ಯಾಧ್ಯಕ್ಷ ಆಗೋ ವ್ಯಕ್ತಿಗಳು ನಮ್ಮಲ್ಲಿ ಇದಾರೆ.ಆದ್ರೆ ಒಬ್ಬರೇ ಅಧ್ಯಕ್ಷರಾಗಬೇಕು.ಹೀಗಾಗಿ ಅಳೆದು ತೂಗಿ ವಿಜಯೇಂದ್ರ ಅವರನ್ನು ಆಯ್ಕೆಮಾಡಲಾಗಿದೆ.
ಸಿಟಿ ರವಿ ಅವರು ಕೂಡಾ ಆಕಾಂಕ್ಷಿ ಇದ್ರು.
ಅದರೆ ಬೇರೆ ಬೇರೆ ಕಾರಣದಿಂದ ವಿಜಯೇಂದ್ತ ಅವರ ಆಯ್ಕೆಯಾಗಿದೆ.
ಹೀಗಾಗಿ ಅಸಮಾಧಾನ ಸಹಜ,ಆದ್ರೆ ಸಿಟಿ ರವಿ ಹೇಗೆ ಅಂತಾ ನನಗೆ ಗೊತ್ತು.ನನ್ನ ಸ್ನೇಹಿತ ಸಿಟಿ ರವಿ,ಎರಡು ದಿನ ಮತ್ತೆ ಅವರೇ ಮುಂದೆ ನಿಂತು ಎಲ್ಲ ಸರಿ ಮಾಡ್ತಾರೆ ಎಂದ ಮುರುಗೇಶ ನಿರಾಣಿ.
ಕೆಲ ಅಸಮಾಧಾನ ಇದ್ರು,ಅದನ್ನ ಹೈಕಮಾಂಡ್ ಸರಿ ಮಾಡತ್ತೆ..ವಿಜಯೇಂದ್ರ ನನಗೆ ಮಾತಾಡಿದ್ದಾರೆ,ಎಲ್ಲರೂ ಒಂದೇ ಇರೋಣ ಎಂದಿದ್ದಾರೆ.
ಸಿಟಿ ರವಿ,ಸೋಮಣ್ಣ ಯಾರೇ ಇರಲಿ ಅವರ ಮನೆಗೆ ನಾವ ಹೋಗ್ತೀವಿ ಎಂದ ಮುರುಗೇಶ ನಿರಾಣಿ.
ನಾನು ಲೋಕಸಭೆಗೆ ನಿಲ್ಲಲ್ಲ.
ಗುರುವಾರ ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಇದೆ.
ಒಳ್ಳೆಯ ವಿರೋಧ ಪಕ್ಷದ ನಾಯಕರ ಆಯ್ಕೆಯಾಗತ್ತೆ.
ಯತ್ನಾಳ ಸೇರಿ ಎಲ್ಲರಿಗೂ ಮಂತ್ರಿ ಆಗಬೇಕು,ಮುಖ್ಯಮಂತ್ರಿ ಆಗಬೇಕ ಅಂತಾ ಇರತ್ತೆ.
ಕೆಲವ ಸಲ ತ್ಯಾಗ ಮಾಡಬೇಕಾಗತ್ತೆ.ಸದಾನಂದಗೌಡರದು ದೊಡ್ಡ ಗುಣ ಎಂದ ನಿರಾಣಿ.
ಆಪರೇಶನ್ ಕಮಲ ವಿಚಾರ..
ಸ್ವಲ್ಪ ಕಾದು ನೋಡಿ ಎಂದ ಮುರುಗೇಶ ನಿರಾಣಿ.
ಪರೋಕ್ಷವಾಗಿ ರಾಜ್ಯದಲ್ಲಿ ಆಪರೇಶನ್ ಕಮಲ ನಡೀತಿದೆ ಎಂದು ಒಪ್ಪಿಕೊಂಡ ನಿರಾಣಿ.
ಈ ಸರ್ಕಾರ ಐದು ವರ್ಷ ಇರಲಿ ಎಂದ ಮುರುಗೇಶ ನಿರಾಣಿ..
ಇರಲಿಲ್ಲ ಅಂದ್ರೆ ನಾವೇನ ಮಾಡೋಕೆ ಆಗಲ್ಲ ಎಂದ ನಿರಾಣಿ.
ಇದು ಕಾಂಗ್ರೆಸ್ ಸರ್ಕಾರ ಅಲ್ಲ
ಅಲಯನ್ಸ್ ಸರ್ಕಾರ.
ಸಿದ್ದರಾಮಯ್ಯ,ಡಿಕೆಶಿವಕುಮಾರ್,ಖರ್ಗೆ,ಪರಮೇಶ್ವರ ಅಲಯನ್ಸ್ ಸರ್ಕಾರ.
ಅದರ ನೇತೃತ್ವ ಸಿದ್ದರಾಮಯ್ಯ.
ಅವರ ಅವರ ಜಗಳದಲ್ಲಿಯೇ ಸರ್ಕಾರ ಹೋಗತ್ತೆ ಎಂದ ನಿರಾಣಿ.ನಾವು ಆಪರೇಶನ್ ಕಮಲ ಮಾಡಲ್ಲ.ರಾಜ್ಯದಲ್ಲಿ ವ್ಯಾಪಕ ಬ್ರಷ್ಟಾಚಾರದ ಇದೆ ಎಂದ ನಿರಾಣಿ.
ಉದಯ ವಾರ್ತೆ ಹುಬ್ಬಳ್ಳಿ.