ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಠೀಕಾಣಿ ಹೂಡಿದ್ದ ಎಡಿಟಿಪಿ ಬಸಂತಿ ಪಾಟೀಲ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿದ್ದು ಅವರ ಜಾಗಕ್ಕೆ ವಾಣಿಶ್ರೀ ಹಂಪಿಕರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
Oplus_16777216
ವಾಣಿಶ್ರೀ ಹಂಪಿಕರ ಈ ಹಿಂದೆ ಹುಬ್ಬಳ್ಳಿ ಎಡಿಟಿಪಿಯಾಗಿ ಕಾರ್ಯನಿರ್ವಹಿಸಿದ್ದು ಈಗ ಮತ್ತೆ ಅದೇ ಜಾಗಕ್ಕೆ ಮರಳಿ ಬಂದಿದ್ದಾರೆ.ವಾಣಿಶ್ರೀ ಅವರನ್ನು ಧಾರವಾಡ ಎಡಿಟಿಪಿಗೆ ತರಲು ಪ್ರಭಾವಿ ಅಧಿಕಾರಿಯೊಬ್ಬರ ಕೈವಾಡವೂ ಇದೆ ಎನ್ನಲಾಗಿದೆ.ಆ ಅಧಿಕಾರಿ ಕಳೆದ ಮೂರು ದಿನಗಳಿಂದ ಬೆಂಗಳೂರಲ್ಲಿ ಠಿಕಾಣಿ ಹೂಡಿ ಆದೇಶ ಮಾಡಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.