ಸ್ವಯಂ ನಿವೃತ್ತಿಗೆ ಮುಂದಾಗಿದ್ದ ಹಿರಿಯ ಪೋಲೀಸ ಅಧಿಕಾರಿ…ಸಿಎಂ.. ಹೋಮ್ ಮಿನಿಸ್ಟರ್ ಮನವೊಲಿಕೆ..ಕರ್ತವ್ಯಕ್ಕೆ ಹಾಜರಾದ ಭರಮನಿ…
ಹುಬ್ಬಳ್ಳಿ:- ಹೌದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಡಿಷನಲ್ ಎಸ್ ಪಿ ನಾರಾಯಣ ಭರಮನಿ ಅವರಿಗೆ ಸಿಎಂ ಸಿದ್ಧರಾಮಯ್ಯ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಅವರು ಸ್ವಯಂ ನಿವೃತ್ತಿಗೆ ಮುಂದಾಗಿದ್ದರು.ಆ ಹಿನ್ನೆಲೆಯಲ್ಲಿ ಗೃಹ ಇಲಾಖೆಗೂ ಪತ್ರ ಬರೆದಿದ್ದರು.
ಈಗ ದಿಡೀರನೇ ಮನಸ್ಸು ಬದಲಾಯಿಸಿದ ಶಿಸ್ತಿನ ಸಿಪಾಯಿ ನಾರಾಯಣ ಭರಮನಿ ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಕಾರಣ ಕೇಳಿದರೆ ಸಿಎಂ ಮತ್ತು ಹೋಮ್ ಮಿನಿಸ್ಟರ್ ಮಾತಾಡಿದ್ದಾರೆ.ನಾನು ಶಿಸ್ತಿನ ಇಲಾಖೆಯಲ್ಲಿದ್ದೇನೆ ಹೀಗಾಗಿ ಕರ್ತವ್ಯಕ್ಕೆ ಹಾಜರಾಗುತ್ತೇದ್ದೇನೆ ಎಂದು ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.