1983 ನೇ ಬ್ಯಾಚ್ ನ ಕಿಮ್ಸ್ ವಿದ್ಯಾರ್ಥಿನೇ ಕಿಮ್ಸ್ ಡೈರೆಕ್ಟರ್..ಚಾಜ್೯ ತೆಗೆದುಕೊಂಡ ಡಾ:- ಈಶ್ವರ ಹೊಸಮನಿ.

Share to all

1983 ನೇ ಬ್ಯಾಚ್ ನ ಕಿಮ್ಸ್ ವಿದ್ಯಾರ್ಥಿನೇ ಕಿಮ್ಸ್ ಡೈರೆಕ್ಟರ್..ಚಾಜ್೯ ತೆಗೆದುಕೊಂಡ ಡಾ:- ಈಶ್ವರ ಹೊಸಮನಿ.

ಹುಬ್ಬಳ್ಳಿ:- ಪ್ರತಿಷ್ಠಿತ ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕರಾಗಿ ಡಾ:- ಈಶ್ವರ ಹೊಸಮನಿ ಚಾಜ್೯ ತೆಗೆದುಕೊಂಡಿದ್ದಾರೆ.ಈ ಹಿಂದೆ ನಿರ್ಧೇಶಕರಾಗಿದ್ದ ಎಪ್.ಎಸ್.ಕಮ್ಮಾರ ಅವರ ಸ್ಥಾನಕ್ಕೆ ಡಾ:- ಈಶ್ವರ ಹೊಸಮನಿ ಆಯ್ಕೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಮೂಲತ: ಬದಾಮಿಯವರಾದ ಡಾ:- ಈಶ್ವರ ಹೊಸಮನಿ ಹುಬ್ಬಳ್ಳಿಯ ಕಿಮ್ಸನಲ್ಲೇ ಎಂಬಿಬಿಎಸ್ ಹಾಗೂ ಎಂ ಎಸ್ ಮುಗಿಸಿದ್ದು ಇಲ್ಲಿಯೇ ಜನರಲ್ ಸರ್ಜರಿಯ ಎಚ್ಓಡಿ ಆಗಿ ಹಾಗೂ ಕಿಮ್ಸ್ ನ ಪ್ರಿನ್ಸಿಪಲ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

1983 ನೇ ಬ್ಯಾಚನ ಡಾ:- ಈಶ್ವರ ಹೊಸಮನಿ ಓದಿದ ಸಂಸ್ಥೆಯಲ್ಲಿಯೇ ಡೈರೆಕ್ಟರಾಗಿ ಕಾರ್ಯನಿರ್ವಹಿಸಲಿದ್ದಾರೆ.ಅಲ್ಲದೇ ಬರುವ ಮೇ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author