ಹುಬ್ಬಳ್ಳಿ:- ಈ ಹಿಂದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಆಗಿದ್ದ ಡಾ:- ಈಶ್ವರ ಉಳ್ಳಾಗಡ್ಡಿ ಇನ್ಮುಂದೆ ಧಾರವಾಡ ಜಿಲ್ಲಾ ಶಿಕ್ಷಣ ಇಲಾಖೆಯ ಕಮೀಷನರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಉತ್ತಮ ಕೆಲಸ ಮಾಡಿದ್ದ ಡಾ:- ಈಶ್ವರ ಉಳ್ಳಗಡ್ಡಿ ಕಳೆದ ಒಂದು ತಿಂಗಳುಗಳಿಂದ ಬೀದರ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಈಗ ಸರಕಾರ ಮತ್ತೊಂದು ಆದೇಶ ಮಾಡಿದ್ದು ಡಾ:- ಈಶ್ವರ ಉಳ್ಳಾಗಡ್ಡಿ ಅವರನ್ನು ಧಾರವಾಡ ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.