ಧಾರವಾಡ ಎಡಿಷನಲ್ ಎಸ್ ಪಿ ಎತ್ತಂಗಡಿ…ಬೆಳಗಾವಿಗೆ ವರ್ಗಾವಣೆ ಮಾಡಿ ಸರಕಾರ ಆದೇಶ….
ಹುಬ್ಬಳ್ಳಿ:- ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಡಿಷನಲ್ ಎಸ್ ಪಿ ನಾರಾಯಣ ಭರಮನಿ ಅವರಿಗೆ ಸಿಎಂ ಸಿದ್ಧರಾಮಯ್ಯ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಅವರು ಸ್ವಯಂ ನಿವೃತ್ತಿಗೆ ಮುಂದಾಗಿದ್ದರು.ಆ ಹಿನ್ನೆಲೆಯಲ್ಲಿ ಗೃಹ ಇಲಾಖೆಗೂ ಪತ್ರ ಬರೆದಿದ್ದರು.
ನಂತರ ಸಿಎಂ ಹಾಗೂ ಹೋಮ್ ಮಿನಿಸ್ಟರ್ ಮನವೊಲಿಸಿದ ನಂತರ ಮನಸ್ಸು ಬದಲಾಯಿಸಿದ ಶಿಸ್ತಿನ ಸಿಪಾಯಿ ನಾರಾಯಣ ಭರಮನಿ ಕರ್ತವ್ಯಕ್ಕೆ ಹಾಜರಾಗಿದ್ದರು.
ಈಗ ಸರಕಾರ ಅವರನ್ನು ಧಾರವಾಡದಿಂದ ಬೆಳಗಾವಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
