ಸಚಿವರ ಅನಧಿಕೃತ OSD ಮಾರುತಿ ಮುರಿದ ಲೋಕಾಯುಕ್ತರು….ಟೌನ್​ ಪ್ಲ್ಯಾನಿಂಗ್​ ಅಧಿಕಾರಿ ಮನೆಯಲ್ಲಿ ಸಿಕ್ಕಿತು ಬಂಗಾರ..ಬೆಳ್ಳಿ ಹಣ..

Share to all

ಸಚಿವರ ಅನಧಿಕೃತ OSD ಮಾರುತಿ ಮುರಿದ ಲೋಕಾಯುಕ್ತರು….ಟೌನ್​ ಪ್ಲ್ಯಾನಿಂಗ್​ ಅಧಿಕಾರಿ ಮನೆಯಲ್ಲಿ ಸಿಕ್ಕಿತು ಬಂಗಾರ..ಬೆಳ್ಳಿ ಹಣ..ಆಸ್ತಿಗಳ ದಾಖಲೆ.

ಬೆಂಗಳೂರು:- ಹೌದು ನಿನ್ನೆ ರಾಜ್ಯಾದ್ಯಂತ ಹಲವು ಅಧಿಕಾರಿಗಳ ಮನೆ ಮೇಲೆ ನಡೆದ ಲೋಕಾಯುಕ್ತ ಪೋಲೀಸರ ದಾಳಿಯಲ್ಲಿ ನಗರಾಭಿವೃದ್ದಿ ಇಲಾಖೆಯಲ್ಲಿ ಮನೆ ಮಾತಾಗಿದ್ದ ಮಾರುತಿ ಮನೆಗಳ ಮೇಲೆಯೂ ಲೋಕಾಯುಕ್ತ ರೇಡ್​ ಆಗಿದೆ.

ಮಾರುತಿಗೆ ಸಂಬಂಧಿಸಿದ ಹತ್ತು ಕಡೆ ದಾಳಿ ಮಾಡಿದ ಪೋಲೀಸರು 8 ನಿವೇಶನ.5 ವಾಸದ ಮನೆ.19 ಎಕರೆ ಕೃಷಿ ಜಮೀನು.2.30 ಲಕ್ಷ ನಗದು.77.76 ಲಕ್ಷ ರೂ.ಮೌಲ್ಯದ ಚಿನ್ನಾಭರಣ.42 ಲಕ್ಷ ರೂ.ಮೌಲ್ಯದ ವಾಹನಗಳು.10 ಲಕ್ಷ ರೂ.ಬ್ಯಾಂಕ್ ಬ್ಯಾಲನ್ಸ್.18.39 ಲಕ್ಷ ರೂ.ಮೌಲ್ಯದ ದುಬಾರಿ ಗೃಹೋಪಯೋಗಿ ವಸ್ತುಗಳು.ಸೇರಿ ಒಟ್ಟು 6.34 ಕೋಟಿ ಆಸ್ತಿ ಪತ್ತೆಯಾಗಿದೆ.

ಯಾರು ಈ ಮಾರುತಿ..


ಮಾರುತಿ ಅಂದರೆ ಸಾಕು.ರಾಜ್ಯದ ಹತ್ತೂ ಮಹಾನಗರ ಪಾಲಿಕೆಗಳ ಸಿಬ್ಬಂದಿಗಳ ಕನಸಿನಲ್ಲಿ ಬರುವ ಮನುಷ್ಯ.ವಿಧಾನಸೌಧದ ಮೂರನೇ ಮಹಡಿಯ 316 A ಕೊಠಡಿಯಲ್ಲಿ ಎರಡನೇ ಟೇಬಲ್ ಗೆ ಅನಧಿಕೃತವಾಗಿ ಕುಳಿತು ವರ್ಗಾವಣೆಯ ಪೈಲ್ ಗಳನ್ನು ಚಾಚೂ ತಪ್ಪದೇ ನೋಡಿ… ಕೊಟ್ಟರೇ ಪೈಲ್ ಮುಂದೆ, ಇಲ್ಲದಿದ್ದರೆ ಸಿ ಆ್ಯಂಡ್ ರೂಲ್ ಹೇಳುವ ಮಹಾಚಾಲಾಕಿನೇ ಮಾರುತಿ

ಮಾರುತಿ ಹಿನ್ನೆಲೆ ಏನು..?

ಮಾರುತಿ 2010ನೇ ಸಾಲಿನಲ್ಲಿ ಸಹಾಯಕ ನಗರ ಯೋಜಕರಾಗಿ, ಸಹಾಯಕ ನಿರ್ದೇಶಕರ ಕಚೇರಿ ಮೈಸೂರಿನಲ್ಲಿ ನೇಮಕ ಆದರು. ಬಳಿಕ 2016 ನೇ ಸಾಲಿನಲ್ಲಿ ಹೈದ್ರಾಬಾದ್-ಕರ್ನಾಟಕ ವೃಂದದಲ್ಲಿ ನಗರ ಯೋಜಕರ ಹುದ್ದೆಗೆ ಮುಂಬಡ್ತಿ ಹೊಂದಿ ಬಿಡಿಎಗೆ ನಿಯೋಜನೆ ಆದರು.

ತದನಂತರ 2022ನೇ ಸಾಲಿನಲ್ಲಿ ಹೈದ್ರಾಬಾದ್-ಕರ್ನಾಟಕ ವೃಂದದಲ್ಲಿಯೇ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ಹೊಂದಿ ಮಾಲೂರು ಯೋಜನಾ ಪ್ರಾಧಿಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಿಯೋಜನೆ ಆದರು. 2023 ನೇ ಸಾಲಿನಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್​ ರ ವಿಶೇಷ ಕರ್ತವ್ಯಾಧಿಕಾರಿಯಾಗಿ (OSD) ನೇಮಕ ಆದರು.

ಇತ್ತೀಚೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆ ಹಗರಣದಲ್ಲಿ ಮಾರುತಿ ಬಾಗ್ಲಿ ಹೆಸರು ಕೇಳಿ ಬಂದಿದ್ರಿಂದ ಈತನನ್ನು ಸಚಿವರ ವಿಶೇಷ ಕರ್ತವ್ಯಾಧಿಕಾರಿಯಿಂದ ಬಿಡುಗಡೆ ಮಾಡಲಾಯಿತು. ಪ್ರಸ್ತುತ ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದರೆ ಇವರಿಗೆ ಎಲ್ಲರಿಗೂ ನೀಡುವಂತೆ ಕಚೇರಿ ಕೆಲಸಗಳನ್ನು ನೀಡದೇ ಕೇವಲ ವರ್ಗಾವಣೆ, ಟೆಂಡರ್‌ ವಿಷಯಗಳನ್ನು ಮಾತ್ರ ನಿರ್ವಹಿಸುಂತೆ ಆದೇಶಿಸಲಾಗಿದ್ದು ಈಗಲೂ ಸಹ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರ ಅನಧಿಕೃತ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಿಯಮಾವಳಿಗಳಂತೆ ಹೈದ್ರಾಬಾದ್-ಕರ್ನಾಟಕ ವೃಂದದಲ್ಲಿ ಮುಂಬಡ್ತಿ ಪಡೆದವರು ಕನಿಷ್ಟ 5 ವರ್ಷ ಹೈದ್ರಾಬಾದ್-ಕರ್ನಾಟಕ ವ್ಯಾಪ್ತಿಯಲ್ಲಿನ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಬೇಕು. ಆದರೆ ಬಾಗ್ಲಿ ಹೈದ್ರಾಬಾದ್-ಕರ್ನಾಟಕ ವ್ಯಾಪ್ತಿಯಲ್ಲಿನ ಜಿಲ್ಲೆಗಳಲ್ಲಿ ಒಂದು ದಿನವೂ ಸಹ ಸೇವೆ ಸಲ್ಲಿಸಿಲ್ಲ. ಮಾರುತಿ ಹೈದ್ರಾಬಾದ್-ಕರ್ನಾಟಕ ವೃಂದದಲ್ಲಿ ಅಕ್ರಮವಾಗಿ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ಹೊಂದಿರುವುದನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ಪ್ರಕರಣ ಸಂಖ್ಯೆ 2191-92/2022 ರಲ್ಲಿ ವಜಾ ಮಾಡಿದ್ರೂ ಸಹ ಉಚ್ಚ ನ್ಯಾಯಲಯದಲ್ಲಿ ಪ್ರಕರಣ ಸಂಕ್ಯೆ 20875/2023 ಮತ್ತು 20918/2023 ರಲ್ಲಿ ತಡೆಯಾಜ್ಞೆ ತಂದು ಅಕ್ರಮವಾಗಿ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ಮುಂದುವರೆಯುತ್ತಿರುವ ಆರೋಪ ಕೇಳಿ ಬಂದಿತ್ತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಮಾರುತಿ ಹಾಗೂ ಇತರೆ 4 ಮಂದಿಯನ್ನು ಸಹಾಯಕ ನಿರ್ದೇಶಕರ ಹುದ್ದೆಯಿಂದ ಹಿಂಬಡ್ತಿ ನೀಡುವಂತೆ ಕಡತ ಸಂಖ್ಯೆ ಸಿಆಸುಇ 42 ಹೈಕಉ 2024 ಮತ್ತು ನಅಇ 120 ನಯೋಸೇ 2020 ರಲ್ಲಿ ಅಭಿಪ್ರಾಯ ನೀಡಿದ್ರೂ ಸಹ ನಗರಾಭಿವೃದ್ಧಿ ಇಲಾಖೆ ಕಣ್ಮುಚ್ಚಿ ಕುಳಿತಿರುವ ಆರೋಪ ಇದೆ. ಕಾರಣ ಈತ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದು ಪ್ರಭಾವ ಬಳಸಿರುವ ಆರೋಪ ಕೂಡ ಇದೆ.

ಉದಯ ವಾರ್ತೆ
ಬೆಂಗಳೂರು


Share to all

You May Also Like

More From Author