ಸದನದಲ್ಲಿ‌ ಪ್ರತಿಧ್ವನಿಸಿದ ಹುಬ್ಬಳ್ಳಿ ಪಾಲಿಕೆ…ಒಬ್ಬರಿಗೆ ಐದೈದು ಹುದ್ದೆ ಎಂದ ಶಾಸಕ..

Share to all

ಸದನದಲ್ಲಿ‌ ಪ್ರತಿಧ್ವನಿಸಿದ ಹುಬ್ಬಳ್ಳಿ ಪಾಲಿಕೆ…ಒಬ್ಬರಿಗೆ ಐದೈದು ಹುದ್ದೆ ಎಂದ ಶಾಸಕ..

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಒಬ್ಬೊಬ್ಬರಿಗೆ ಐದೈದು ಹುದ್ದೆ ನೀಡಿದ್ದಾರೆ.ಅದರಿಂದ ಆಡಳಿತ ನಿರ್ವಹಣೆ ಕಷ್ಟ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸರಕಾರದ ಉತ್ತರದ ಮೇಲೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಎ..ಬಿ..ಸಿ..ಡಿ ಹುದ್ದೆಗಳು ಮಂಜೂರಾದ ಮತ್ತು ಖಾಲಿ ಇರುವ ಹುದ್ದೆಗಳ ಬಗ್ಗೆ ಪ್ರಸ್ತಾಪ ಮಾಡಿದರು.

ಪಾಲಿಕೆಯಲ್ಲಿ ಒಟ್ಟು ಮಂಜೂರಾದ ಹುದ್ದೆಗಳು 3794 ಅದರಲ್ಲಿ ಕೇವಲ 1358 ಕರ್ತವ್ಯ ನಿರ್ವಹಿಸುತ್ತಿದ್ದಾರೆ.. ಒಟ್ಟು 65% ಹುದ್ದೆಗಳು ಖಾಲಿ ಇವೆ..ಕೆಟಗೇರಿ “A”- ಹುದ್ದೆಗಳು ಪಾಲಿಕೆಗೆ ಮಂಜೂರಾಗಿದ್ದು 49..ಕರ್ತವ್ಯ ನಿರ್ವಹಿಸುತ್ತಿರುವವರು 35%. 17…”B” ಕೆಟಗೇರಿಯಲ್ಲಿ ಮಂಜೂರಾದ ಹುದ್ದೆ 64…ಕರ್ತವ್ಯನಿರ್ವಹಿಸುತ್ತಿರುವವರು.21..”C” ಕೆಟಗೇರಿ ಮಂಜೂರಾದ ಹುದ್ದೆ 1183..ಕರ್ತವ್ಯನಿರ್ವಹಿಸುತ್ತಿರುವವರು 430..”D” ಕೆಟಗೇರಿ ಮಂಜೂರಾದ ಹುದ್ದೆ 2498..ಕರ್ತವ್ಯ ನಿರ್ವಹಿಸುತ್ತಿರುವವರು 1930 ಇಷ್ಟೆಲ್ಲಾ ಹುದ್ದೆಗಳು ಖಾಲಿ ಇರುವಾಗ ಆಡಳಿತ ಹೇಗೆ ಎನ್ನೋ ಪ್ರಶ್ನೆಯನ್ನು ಶಾಸಕರು ಕೇಳಿದರು…

ಇದರ ಜೊತೆಗೆ ಒಬ್ಬ ಕಾರ್ಯನಿರ್ವಾಹಕ ಅಭಿಯಂತರರಿಗೆ ಐದು ಹುದ್ದೆಗಳನ್ನು ನೀಡಿದ್ದಾರೆ..ಅದರಿಂದ ಜನರ ಸಮಸ್ಯೆಗೆ ಅವರು ಹೇಗೆ ಸ್ಪಂದಿಸಲು ಸಾದ್ಯ ಎಂದು ಸದನಕ್ಕೆ ಹೇಳುವ ಜೊತೆಗೆ ಎಇ ಗಳಿಗೆ ಎಇಇ ಹುದ್ದೆಗಳನ್ನು ನೀಡಿದ್ದಾರೆ ಎಂದು ಸರಕಾರದ ಗಮನ ಸೆಳೆದರು…

ಉದಯ ವಾರ್ತೆ
ಬೆಂಗಳೂರು.


Share to all

You May Also Like

More From Author