ಸಚಿವ ಸಂತೋಷ ಲಾಡ್ ಕುಂದಗೋಳಕ್ಕಷ್ಟೇ ಅಲ್ಲಾ…ಸಹಾಯ ಕೇಳಿ ಬಂದವರಿಗೆ ಎಲ್ಲರಿಗೂ ಪೌಂಡೇಷನ್ ದಿಂದ ಸಹಾಯ ಹಸ್ತ...
ಹುಬ್ಬಳ್ಳಿ:- ಸಚಿವ ಸಂತೋಷ ಲಾಡ್ ರಾಜ್ಯದ ಯಾವುದೇ ಮೂಲೆಯಲ್ಲೂ ಬರತಾರೆ ಅಂದರೆ ಅವರ ಸಹಾಯಕ್ಕಾಗಿ ಜನ ದುಂಬಾಲು ಬೀಳ್ತಾರೆ.ಬಂದವರು ಹೇಳಿಕೊಳ್ಳುವ ಕಷ್ಟ ಕೇಳಿದ ಮೇಲೆ ಇಲ್ಲಾ ಅನ್ನೋ ಮಾತಿಲ್ಲದೇ ಅವರ ಪೌಂಡೇಷನ್ ದಿಂದ ಸಹಾಯ ಮಾಡತಾ ಬಂದಿದ್ದಾರೆ.

ಸಚಿವ ಸಂತೋಷ ಲಾಡ್ ಪೌಂಡೇಷನ್ ಇಡೀ ರಾಜ್ಯಾದ್ಯಂತ ಸಕ್ರೀಯವಾಗಿದೆ.ಆದರೆ ಅವರು ಕಲಘಟಗಿ ಮತ ಕ್ಷೇತ್ರದ ಶಾಸಕರು.ಪೌಂಡೇಷನ್ ದಿಂದ ಕಲಘಟಗಿ ಮಾತ್ರ ಸೀಮಿತವಾಗಿರಬೇಕಾ ಅನ್ನೋ ಹಾಗಿಲ್ಲಾ..ಕಷ್ಟ ಅಂತಾ ಯಾರೇ ಸಹಾಯ ಹಸ್ತ ಕೇಳಿಕೊಂಡು ಬಂದರೆ ಅವರ ಕ್ಷೇತ್ರ ಯಾವುದು?..ಅವರ ಜಾತಿ ಯಾವುದು? ಅವರ ಧರ್ಮ ಯಾವುದು?ಅದು ಇದು ಏನೂ ಕೇಳದೆ ಸಹಾಯ ಮಾಡತಾ ಬಂದಿದ್ದಾರೆ.
