ಹುಬ್ಬಳ್ಳಿ:- ಹುಬ್ಬಳ್ಳಿ ಬೆಂಡಿಗೇರಿ ಪೋಲೀಸ ಠಾಣೆಯಲ್ಲಿ ದಾಖಲಾದ ಪಡಿತರ ಅಕ್ಕಿ ಸಾಗಾಟ ಪ್ರಕರಣದಲ್ಲಿ ದಾಖಲಾಗಿದ್ದ “FIR” ಅನ್ನು ಹೈಕೋಟ್೯ ರದ್ದು ಪಡಿಸಿದೆ.ಆ ಹಿನ್ನೆಲೆಯಲ್ಲಿ ಕೆಲ ಆರೋಪಿಳು ಬಚಾವ ಆಗಿದ್ದಾರೆ.
ಆ ಪಡಿತರ ಅಕ್ಕಿ ಸಾಗಾಟ ಪ್ರಕರಣದಲ್ಲಿ FIR ದಾಖಲಿಸಿಕೊಂಡು ಉಳಿದ ಆರೋಪಿಗಳ ಪತ್ತೆಗಾಗಿ ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸರು ಬೆನ್ನತ್ತಿರುವಾಗಲೇ ಪ್ರಕರಣದ FIR ಕ್ವಾಷ್ ಆಗಿದೆ.
ಹೀಗಾಗಿ ಪಡಿತರ ಅಕ್ಕಿ ಸಾಗಾಣಿಕೆ ಪ್ರಕರಣದಲ್ಲಿ ಪೋಲೀಸರು ಹಾವು ಕಿತ್ತ ಹಲ್ಲು ಆಗಿದ್ದಾರೆ.ಇದೇ ಪ್ರಕರಣದಲ್ಲಿ ಎರಡನೇ ಆರೋಪಿ ಆಗಬೇಕಿದ್ದ ಶ್ರೀಧರ ಬಚಾವ್ ಆಗಿದ್ದಾನೆ.ಆದರೂ ಸಹ ಅವನಿಗೆ ಕಾದಿದೆ ಮಾರಿ ಹಬ್ಬ.
ಪ್ರಕರಣದಲ್ಲಿ ಬೆಂಡಿಗೇರಿ ಪೋಲೀಸರಿಗೆ ಬಾಂಬೆ ತೋರಿಸಿರುವ ಶ್ರೀಧರ.ಪೋಲೀಸರ ಬಗ್ಗೆ ಹಾಗೂ ಹಾವೇರಿ ಕಿಂಗ್ ಪಿನ್ ಮತ್ತು ಹುಬ್ಬಳ್ಳಿಯ ಕಿಂಗ್ ಪಿನ್ ಬಗ್ಗೆ ಮಾತನಾಡಿದ ಆಡಿಯೋದಲ್ಲಾದರೂ ಪೋಲೀಸರು ಆರೆಸ್ಟ್ ಮಾಡತಾರಾ ಅಥವಾ ಕೈ ಕಟ್ಟಿ ಕುಳಿತುಕೊಳ್ಳತಾರಾ ಕಾದು ನೋಡಬೇಕಾಗಿದೆ.