ಜನತಾ ಬಜಾರನಲ್ಲಿ “ಅವರಿ”ಗಾದರೂ ಮರ್ಯಾದೆ ಇದೆ..ಪಾಪಾ ಆದರೆ ಅವರಗೆ …?
ಹುಬ್ಬಳ್ಳಿ:- ಹೌದು ನಿನ್ನೆ ರಾತ್ರಿ ಬರೋಬ್ಬರಿ ಮೂರು ಘಂಟೆಗೆ ಪೋಲೀಸರ ಮಾನ..ಮರ್ಯಾದೆ..ಮೂರು ಕಾಸಿಗೆ ನಡು ರಸ್ತೆಯಲ್ಲಿಯೇ ಹರಾಜಾಯ್ತು ಅನ್ನಂಗಾಯ್ತು…
ರಾತ್ರಿ ಹನ್ನೆರಡು ಘಂಟೆಯಿಂದು ಬೆಳಗಿನ ಮೂರು ಘಂಟೆಯವರೆಗೆ ಆ ಹೊಟೆಲ್ ನ ಐಸ್ ಕರಗಿಸಲು ಸೆಕ್ಯುರಿಟಿ ಗಾಡ್೯ ತರಹ ನಿಂತರೂ ಅದೇನು ಕರಗಲಿಲ್ಲಾ..ಆದರೆ ಪೋಲೀಸರ ತಲೆ ಮಾತ್ರ ಬಿಸಿಯಾಗಿದ್ದಂತೂ ನಿಜ…
ಆ ಠಾಣೆಯ ಪೋಲೀಸ ಠಾಣೆಯ ಪೋಲೀಸರ ಕಥೆ ಹೇಗೆ ಆಗಿದೆ ಅಂದರೆ ಹಲ್ಲು ಕಿತ್ತ ಹಾವಿನಂತಾಗಿದೆ..ಅವರ ಮಾತಿಗೆ ಆ ರಸ್ತೆಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲಾ ಅನ್ನೋ ಹಾಗಾಗಿದೆ.ಕಾರಣ ಎಲ್ಲರಿಗೂ ಗೊತ್ತಿದ್ದಿದ್ದೇ….?
ಆ ರಸ್ತೆಯಲ್ಲಿ ಹನ್ನೆರಡು ಘಂಟೆಯವರೆಗೆ ಮಾತ್ರ ಪೋಲೀಸರು ” ಹೀರೋಗಳು”ನಂತರ ಅಲ್ಲಿ ಅವರು “ಜೀರೋಗಳು”..ಹಾಗಂತಾ ನಿನ್ನೆ ರಾತ್ರಿ ಸಾಬೀತಾಗಿ ಹೋಗಿದೆ…ನೈಟ್ ರೌಂಡ್ ಇನ್ಸ್ಪೆಕ್ಟರ್ ಅಂತೂ ಕವಲೂರು ಸಿದ್ದನ ಹಾಗೆ ಬಂದರು..ಹೋದರು..ಇನ್ನೂ ಸೀನಿಯರ್ ಆಪೀಸರ್ಸ್ …?