ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರಲು ಮತ್ತೆ ಡೊಂಬರ ಆಟ ..
ಹುಬ್ಬಳ್ಳಿ:- ಈ ಹಿಂದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಆಯುಕ್ತರು ಅಂತಾ ಸರಕಾರದಿಂದ ಆದೇಶ ಮಾಡಿಸಿಕೊಂಡು ಬಂದಿದ್ದ ಮಂಜುನಾಥ ಡೊಂಬರ ಮತ್ತೆ ತೆರೆಮರೆಯಲ್ಲಿ ಹುಬ್ಬಳ್ಳಿಗೆ ಬರಲು ಸಿದ್ಧತೆ ನಡೆಸಿದ್ದಾರೆ.
ಕಳೆದ 2025 ಜೂನ್ 19 ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕಮೀಷನರ್ ಅಂತಾ ಆಡ್೯ರ್ ಮಾಡಿಸಿಕೊಂಡು ಅಂದೇ ಬಿಜೆಪಿಯ ಶಾಸಕರೊಬ್ಬರನ್ನು ಭೇಟಿಯಾಗಿ ಹೂಗುಚ್ಚ ನೀಡಿ ಥ್ಯಾಂಕ್ಸ್ ಹೇಳಿ ರಾತ್ರೋ ರಾತ್ರಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದರು.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರೋವಷ್ಟರಲ್ಲಿ ವರ್ಗಾವಣೆಯ ಆದೇಶ ರದ್ದಾಗಿ ಕೈಯಂದು ಹೋಯತು..ಆದೇಶನೂ ಹೋಯ್ತು ಅಂತಾ ಇಂಗು ತಿಂದು ಮಂಗನಂತಾಗಿದ್ದ ಡೊಂಬರ ಈಗ ಮತ್ತೆ ತೆರೆಮರೆಯಲ್ಲಿ ಹುಬ್ಬಳ್ಳಿಗೆ ಬರಲು ಕಸರತ್ತು ನಡೆಸಿದ್ದಾರಂತೆ.
ಈ ಮದ್ಯೆ ಹುಬ್ಬಳ್ಳಿಯ ಪಾಲಿಕೆ ಆವರಣದಲ್ಲಿ ಮತ್ತೆ ಡೊಂಬರ ಕಮೀಷನರ್ ಆಗಿ ಬರತಾರೆ..ಡಾ:- ರುದ್ರೇಶ ಘಾಳಿ ಅವರು ಹೆಸ್ಕಾಂ ಎಂಡಿ ಆಗಿ ಹೋಗತಾರೆ ಅಂತಾ ಗುಸು ಗುಸು ಆರಂಭವಾಗಿದೆ.ಆದರೆ ದಕ್ಷ ಅಧಿಕಾರಿ ರುದ್ರೇಶ ಘಾಳಿ ಅವರು ಇನ್ನೊಂದು ವರ್ಷ ಪಾಲಿಕೆಯಲ್ಲಿಯೇ ಇರಬೇಕು ಅಂತಾ ಅಭಿವೃದ್ಧಿ ಬಯಸುವ ಒಂದು ಬಣ ಆಸೆ ಪಡುತ್ತಿದೆ.
ಈ ಹಿಂದೆ ಡೊಂಬರ ಆವರ ಆದೇಶ ಕ್ಯಾನ್ಸಲ್ ಆದಾಗಾ ಒಂದು ವರ್ಷ ವೇಟ್ ಮಾಡಿ ಮತ್ತೆ ಹುಬ್ಬಳ್ಳಿಗೆ ಹಾಕಿಕೊಡತೇವಿ ಅಂತಾ ವಿಧಾನಸೌಧದ ಮೂರನೇ ಮಹಡಿಯಲ್ಲಿ ಡೊಂಬರ ಅವರಿಗೆ ಬಾಂಬೆ ತೋರಿಸಿ ಕಳಿಸಿದ್ದರಂತೆ.ಆ ಹಿನ್ನೆಲೆಯಲ್ಲಿ ಈಗ ಮತ್ತೆ ಡೊಂಬರ ವಿಧಾನಸೌಧದ ಮೂರನೇ ಮಹಡಿಯಲ್ಲಿ ಹುಬ್ಬಳ್ಳಿಗೆ ಬರಲು ಜಾತಕ ಪಕ್ಷಿಯಂತೆ ಕಾಯತಾ ಇದ್ದಾರೆ.