ಹುಬ್ಬಳ್ಳಿಯಲ್ಲಿ ಪಾಲಿಕೆಯ ನೋಟೀಸಗಿಲ್ಲಾ,ಕವಡೆ ಕಾಸಿನ ಕಿಮ್ಮತ್ತು..ಒಂದಲ್ಲಾ..ಎರಡಲ್ಲಾ ಮೂರು ವರ್ಷದಿಂದ ನೊಟೀಸ್..ನೋ ರಿಸ್ಪಾನ್ಸ್..
ಹುಬ್ಬಳ್ಳಿ:- ಈ ಹಿಂದೆ ಮಣಿವಣ್ಣನ್ನ ಕಮೀಷನರ ಇದ್ದಾಗ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಿಂದ ನೋಟೀಸ್ ಬಂದಿದೆ ಅಂದರೆ ಸಾಕು ಅಕ್ರಮ ಕಟ್ಟಡಗಳ ಮಾಲಿಕರು ಗಡ..ಗಡ..ಅಂತಿದ್ದರು.ಆದರೆ ಈಗ ಕಾಲ ಬದಲಾಗಿದೆ.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನೋಟೀಸ್ ಬಂದರೆ, ಇರಲಿ ಬಿಡಿ ಅವರದೇನು ಅನ್ನೋ ಕಾಲ ಬಂದಿದೆ.
ಇದಕ್ಕೆ ಒಂದು ತಾಜಾ ಉದಾಹರಣೆ ಹುಬ್ಬಳ್ಳಿ ಗೋಕುಲ ರಸ್ತೆಯ ವಾಡ್೯ ನಂಬರ 30 ರ ವ್ಯಾಪ್ತಿಯಲ್ಲಿ ಬರುವ ಸೆಂಟ್ರಲ್ ಎಕ್ಸ್ಪ್ರೆಸ್ ಕಾಲೋನಿಯಲ್ಲಿರುವ ತಾರಾ ಎಮರಾಲ್ಡ್ ಹೊಟೆಲ್ ನಲ್ಲಿ ಅಕ್ರಮವಾಗಿ ನಾಲ್ಕನೇ ಮಹಡಿ ಕಟ್ಟಿರುವುದು.
ಈ ಅಕ್ರಮ ನಾಲ್ಕನೇ ಮಹಡಿ ಕಟ್ಟಿರುವ ಕುರಿತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಗರ ಯೋಜನೆ 30-08-2023 ಕ್ಕೆ ಎರಡು ನೋಟೀಸ್ ಕೊಟ್ಟ ಸುಮ್ಮನಾಯ್ತು.ಅಂದರೆ ಅಲ್ಲಿ ಏನೋ ಸಮ್ಮತಿಂಗ್ ಆಗಿ ಮೂರನೇ ನೋಟೀಸ ಕೊಡಲೇ ಇಲ್ಲಾ..ಇದು ಪಾಲಿಕೆಯ ಆಡಳಿತಕ್ಕೆ ಹಿಡಿದ ಕೈಗನ್ನಡಿ.

ಈಗ ಮತ್ತೆ 28-01- 2026 ರಂದು ಇದೇ ತಾರಾ ಎಮರಾಲ್ಡ್ ಹೊಟೆಲ್ ಗೆ ಮೊದಲ ನೋಟೀಸ ನೀಡಿ ನೀವು ಅನಧಿಕೃತವಾಗಿ ನಾಲ್ಕನೇ ಮಹಡಿ ಕಟ್ಟಡ ಕಟ್ಟಿದ್ದರ ಬಗ್ಗೆ ಉದಯ ವಾರ್ತೆಯಲ್ಲಿ ಸುದ್ದಿ ಪ್ರಸಾರವಾಗಿದ್ದು.ನೋಟೀಸ್ ಮುಟ್ಟಿದ ಏಳು ದಿನದೊಳಗಾಗಿ ಕಟ್ಟಡದ ಪರವಾನಿಗೆ ಹಾಗೂ ಮುಕ್ತಾಯ ಪ್ರಮಾಣ ಪತ್ರದೊಂದಿಗೆ ನಗರ ಯೋಜನೆಗೆ ಭೇಟಿ ನೀಡಬೇಕು.ಇಲ್ಲದಿದ್ದರೆ ಮುಂದಿನ ನಿಯಮಾವಳಿ ಪ್ರಕಾರ ಕ್ರಮಕೈಕೊಳ್ಳುವುದಾಗಿ ಸೂಚಿಸಿದೆ.
