ಹುಬ್ಬಳ್ಳಿ-ಧಾರವಾಡದಲ್ಲಿ ಅಕ್ರಮ ದಂಧೆಗಳು..ಸಚಿವರು..ಶಾಸಕರಿಗೂ ಡೋಂಟ್ ಕೇರ್…ಆನೆ ನಡೆದಿದ್ದೇ ದಾರಿ….

Share to all

ಹುಬ್ಬಳ್ಳಿ-ಧಾರವಾಡದಲ್ಲಿ ಅಕ್ರಮ ದಂಧೆಗಳು..ಸಚಿವರು..ಶಾಸಕರಿಗೂ ಡೋಂಟ್ ಕೇರ್…ಆನೆ ನಡೆದಿದ್ದೇ ದಾರಿ….

ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡದಲ್ಲಿ ಅಕ್ರಮ ದಂಧೆಗಳು…ಕಮೀಷನರ್… ಎಸ್ ಪಿ ಗೆ ಎಚ್ಚರಿಕೆ‌ಕೊಟ್ಟ ಶಾಸಕ ವಿನಯ ಕುಲಕರ್ಣಿ…

ಧಾರವಾಡ ಗ್ರಾಮೀಣದಲ್ಲಂತೂ ಹೇಳೋರಿಲ್ಲಾ..ಕೇಳೋರಿಲ್ಲಾ..

ಕ್ಷೇತ್ರದಲ್ಲಿ ನಾನಿಲ್ಲದ ಪರಿಣಾಮ ಬಿಡಾಡಿ ದನಗಳಂತಾಗಿದೆ ಕಾನೂನು ವ್ಯವಸ್ಥೆ.

ಪೋಲೀಸರ ಕೃಪಾಕಟಾಕ್ಷದಲ್ಲೇ ದಂಧೆಗಳು ನಡೆಯುತ್ತಿವೆ..

ರಾಜಾ ರೋಷವಾಗಿ ನಡೆಯುತ್ತಿವೆ ಇಸ್ಪೀಟ…ಮಟ್ಕಾ..ಗಾಂಜಾ..ಅಕ್ರಮ ಸರಾಯಿ ದಂಧೆ.

ಧಾರವಾಡದಲ್ಲಿ ಪೋಲೀಸ ಸಿಬ್ಬಂದಿಗಳಿಂದಲೇ ನಡೆಯುತ್ತಿದೆ ಬಡ್ಡಿ ದಂಧೆ.

ಒಬ್ಬ ಹಿರಿಯ ಶಾಸಕರಿಂದಲೇ ಇಂತಹ ಗಂಭೀರ ಆರೋಪ ಅಂದರೆ ಎಲ್ಲಿಗೆ ಬಂತು ಪೋಲೀಸ ವ್ಯವಸ್ಥೆ.

ಹೌದು ಶಾಸಕ ವಿನಯ ಕುಲಕರ್ಣಿ ಅವರು ಹೇಳೋ ಮಾತು ನೂರಕ್ಕೆ ನೂರರಷ್ಟು ಸತ್ಯವಾಗಿದೆ..ಒಬ್ಬ ಶಾಸಕರು ನೇರಾ ನೇರಾ ಪೋಲೀಸರ ಬಗ್ಗೆ ಆರೋಪ ಮಾಡೋ ಹಂತಕ್ಕೆ ನಮ್ಮ ಹುಬ್ಬಳ್ಳಿ-ಧಾರವಾಡ ಬಂದಿದ್ದೂ ನಿಜ..

ಹುಬ್ಬಳ್ಳಿ-ಧಾರವಾಡ ಸೇರಿದಂತೆ ಎಲ್ಲೆಡೆ ಗಾಂಜಾ…ಅಕ್ರಮ ಸರಾಯಿ..ಇಸ್ಪೀಟ್ ದಂಧೆಗಳಿಗೆ ಕಡಿವಾಣವೇ ಇಲ್ಲದಂತಾಗಿದೆ.ಈ ಹಿಂದೆ ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಅಂತಾ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರೂ ಸಹ ಪೋಲೀಸ ಹಾಗೂ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೂ ಕಿಮ್ಮತ್ತಿಲ್ಲಾ…ಶಾಸಕರ ಮಾತಿಗೂ ಕಿಮ್ಮತ್ತಿಲ್ಲಾ ಅನ್ನೋ ಹಾಗೆ ನಡೆದುಕೊಳ್ಳುತ್ತಿದ್ದಾರೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಪೋಲೀಸ ಅಧಿಕಾರಿಗಳು.


Share to all

You May Also Like

More From Author