ಪೋಲೀಸ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿ ಆರೆಸ್ಟ್…

Share to all

ಪೋಲೀಸ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿ ಆರೆಸ್ಟ್…

ಹುಬ್ಬಳ್ಳಿ:- ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ರಾತ್ರೋ ರಾತ್ರಿ ಕಂಪೌಂಡ ಹಾರಿ ಪರಾರಿಯಾಗಿದ್ದ ಆರೋಪಿ ನೆಟೋರಿಯಸ್ ಪ್ರಜ್ವಲ್ ನೆಟ್ಟೂರನನ್ನು ಬೆಂಡಿಗೇರಿ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
https://youtu.be/ZluZ1TjDr8E?si=189IDMR4KfbZfyFT

ನಿನ್ನೆ ಮಟ..ಮಟ..ಮದ್ಯಾಹ್ನ ಒಬ್ಬರನ್ನು ಭೇಟಿಯಾಗಲು ಬಂದಾಗ ಮಾಹಿತಿ ತಿಳಿದ ಪೊಲೀಸರು ಆರೋಪಿ ಪ್ರಜ್ವಲ್ ನೆಟ್ಟೂರನನ್ನು ಹೆಡಮುರಿ ಕಟ್ಟಿದ್ದಾರೆ.ಮೆಂಡಾ ಮಲ್ಲಿಕ್ ಮಡ್೯ರ್ ಕೇಸನಲ್ಲಿ ಆರೋಪಿಯಾಗಿರುವ ಪ್ರಜ್ವಲ್ ಹುಬ್ಬಳ್ಳಿ ಸಬ್ ಜೈಲಿನಲ್ಲಿ ಹೈಡ್ರಾಮಾ ಮಾಡಿ ವಿಜಯಪುರ ಜೈಲಿಗೆ ಸಿಪ್ಟ್ ಆಗಿದ್ದ ಆರೋಪಿ.

ಸುಡು ಬಿಸಿಲನ್ನು ಲೆಕ್ಕಿಸದೇ ಪ್ರಜ್ವಲ್ ನನ್ನು ಎತ್ತಾಕಿಕೊಂಡ ಬಂದ ಬೆಂಡಿಗೇರಿ ಪೋಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author