ಕೊಲೆಯಾದ ಪೈರೋಜ್ ಕುಟುಂಬದ ಜೊತೆ ರಾಜೀ ಸಂಧಾನಕ್ಕಿಳದರಾ ಇಸ್ಮಾಯಲ್…! ಸಮಯ ಬಂದಾಗ ರಾಜಿಗೆ ಬಂದವರ ಹೆಸರು ಬಹಿರಂಗ…

Share to all

ಕೊಲೆಯಾದ ಪೈರೋಜ್ ಕುಟುಂಬದ ಜೊತೆ ರಾಜೀ ಸಂಧಾನಕ್ಕಿಳದರಾ ಇಸ್ಮಾಯಲ್…! ಸಮಯ ಬಂದಾಗ ರಾಜಿಗೆ ಬಂದವರ ಹೆಸರು ಬಹಿರಂಗ…

ಧಾರವಾಡ:-ಧಾರವಾಡದ ಹಾಸ್ಮಿ ನಗರದ ಕಾಂಗ್ರೆಸ್ ಮುಖಂಡ ಪೈರೋಜ್ ಕುಟುಂಬಕ್ಕೆ ಹಣದ ಆಮಿಷ ತೋರಿಸಿದ್ದಾರಂತೆ ಕಾಂಗ್ರೆಸ್ ಮುಖಂಡ ಇಸ್ಮಾಯಲ್ ತಮಾಟಗಾರ.ಹಾಗಂತ ಕೊಲೆಯಾದ ಪೈರೋಜ್ ಸಹೋದರನೇ ಗಂಭೀರ ಆರೋಪ ಮಾಡಿದ್ದಾರೆ.

ಈ ಕೊಲೆ ಪ್ರಕರಣದಲ್ಲಿ ಇಸ್ಮಾಯಿಲ್ ತಮಾಟಗಾರ ಹೆಸರು ಎಳೆದು ತರಬೇಡಿ ನಿಮ್ಮ ಕುಟುಂಬಕ್ಕೆ 50 ಲಕ್ಷ ಹಣ ನೀಡುವುದಾಗಿ ಬೇರೆಯವರ ಜೊತೆ ಹೇಳಿ ಕಳಿಸಿದ್ದಾರೆ.ಅವರು ನಮ್ಮ ಕುಟುಂಬಕ್ಕೆ 50 ಲಕ್ಷ ಕೊಡೋದು ಬೇಡಾ.ನಾವೇ 50 ಲಕ್ಷಕ್ಕೆ ಇನ್ನೂ ಒಂದು ಲಕ್ಷ ಸೇರಿಸಿ ಕೊಡತೇವಿ ಪೋಲೀಸರು ಅವರನ್ನು ಎನ್ ಕೌಂಟರ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವನು ಕೊಲೆಯಲ್ಲಿ ಭಾಗಿಯಾಗಿಲ್ಲಾ ಅಂದರೆ ತಪ್ಪಿಸಿಕೊಂಡು ಹೋಗಿದ್ದು ಯಾಕೆ.? ಇಸ್ಮಾಯಿಲ್ ತಮಾಟಗಾರ ಸಹೋದರ ಇಲ್ಲೇ ಅಡ್ಡಾಡತಿದ್ದಾನೆ.ಹಿಂಗಾದರೆ ನಮಗೆ ನ್ಯಾಯಾ ಕೊಡಿಸೋರು ಯಾರು.? ಎಂದು ಪ್ರಶ್ನೆ ಮಾಡಿದ್ದಾರೆ.


Share to all

You May Also Like

More From Author