ತಂದೆ ಇಲ್ಲದ ಬಡ ವಿದ್ಯಾರ್ಥಿಯನ್ನ ಬಲಿ ಪಡೆದರಾ ಧಾರವಾಡ ಪೋಲೀಸರು..?

Share to all

ತಂದೆ ಇಲ್ಲದ ಬಡ ವಿದ್ಯಾರ್ಥಿಯನ್ನ ಬಲಿ ಪಡೆದರಾ ಧಾರವಾಡ ಪೋಲೀಸರು..?

ಧಾರವಾಡ:-ಅಬ್ಬಾ ಏನ್ರೀ ಈ ನಮ್ಮ ಧಾರವಾಡ ಪೋಲೀಸರು ಇವರಿಗೆ ಯಾರ ಕಡೆ ದುಡ್ಡು ತಿನ್ನಬೇಕು..ತಿನ್ನಬಾರದು ಅನ್ನೋ ಕಾಮನಸೆನ್ಸು ಬೇಡವಾ…ತಂದೆ ಇಲ್ಲದ ಮಗನನ್ನು ಓದಿಸಲಿಕ್ಕೆಂದೇ ಬಾಗಲಕೋಟೆಯಿಂದ ಮಗನನ್ನು ಕರೆದುಕೊಂಡು ಬಂದು ಧಾರವಾಡದಲ್ಲಿ ಬಾಡಿಗೆ ಮನೆ ಮಾಡಿ ಓದಿಸುತ್ತಿದ್ದ ತಾಯಿಯಿ ಕಷ್ಟವನ್ನೂ ನೋಡದ ಪೋಲೀಸರು ಹೀಗೆ ಮಾಡಿಬಿಟ್ಟರಾ…ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರತಾ ಇದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಗಾಂಜಾ..ಡ್ರಗ್ಸ್ ಮುಕ್ತ ಮಾಡಬೇಕು ಅಂತಾ ಪಣ ತೊಟ್ಟಿರುವ ಪೋಲೀಸ ಕಮೀಷನರ್ ಗಾಂಜಾ ಗಿರಾಕಿಗಳಿಗೆ ಒಂದು ಒಳ್ಳೆ ಪಾಠ ನೀಡಿ ಸರಿ ದಾರಿಗೆ ತರಬೇಕು ಅಂತಾ ಹಗಲಿರುಳು ಕೆಲಸ ಮಾಡತಿದ್ದರೆ ಅವರ ಕೆಳ ಹಂತದ ಈ ಪೋಲೀಸರು ಮಾಡೋ ನೀಚ ಕೆಲಸಕ್ಕೆ ಇಡೀ ಪೋಲೀಸ ಇಲಾಖೆಯೇ ತಲೆತಗ್ಗಿಸುವಂತಾಗಿದೆ..

ಈ ಒಂದು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಮೀಷನರ್ ಈಗಾಗಲೇ ವಿದ್ಯಾಗಿರಿಯ ಹೆಡ್ ಕಾನಸ್ಟೇಬಲ್ ಚಂದ್ರು ನಡುವಿನಮನಿ..ಕಿರಣ ಡೊಕ್ಕನ್ನವರ..ಹಾಗೂ ಪೇದೆ ಸಯ್ಯದ ಎಂಬುವರನ್ನ ಸಸ್ಪೆಂಡ್ ಮಾಡಿದ್ದಾರೆ..

ಉದಯ ವಾರ್ತೆ

ಧಾರವಾಡ.


Share to all

You May Also Like

More From Author