ವಿದ್ಯಾರ್ಥಿ ಸುಸೈಡ್ ಪ್ರಕರಣ..ತಪ್ಪಿತಸ್ಥರ ಮೇಲೆ ಕೊಲೆ ಪ್ರಚೋದನೆ ಕೇಸ್ ದಾಖಲಿಸಿ ಬಿಜೆಪಿ..

Share to all

ವಿದ್ಯಾರ್ಥಿ ಸುಸೈಡ್ ಪ್ರಕರಣ..ತಪ್ಪಿತಸ್ಥರ ಮೇಲೆ ಕೊಲೆ ಪ್ರಚೋದನೆ ಕೇಸ್ ದಾಖಲಿಸಿ ಬಿಜೆಪಿ..

ಧಾರವಾಡ:-ಹೌದು ಪೋಲೀಸರ ಹಣದಾಹಿ ಕೃತ್ಯಕ್ಕೆ ತಂದೆ ಇಲ್ಲದ ತಬ್ಬಲಿ ವಿದ್ಯಾರ್ಥಿಯನ್ನು ಬಲಿ ಪಡೆದರಾ ಪೋಲೀಸರು ಅನ್ನೋ ಅನುಮಾನಕ್ಕೆ ಈಗ ರೆಕ್ಕೆ ಪುಕ್ಕ ಬಂದಂತಾಗಿದೆ.ನಿನ್ನೆ ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ ಎನ್.ಶಶಿಕುಮಾರ ಅವರು ಮೂವರು ಪೋಲೀಸರನ್ನು ಸಸ್ಪೆಂಡ್ ಮಾಡಿ..ಪ್ರಕರಣವನ್ನು ತನಿಖೆಗೆ ನೀಡಿದ್ದಾರೆ…

ಈ ಮದ್ಯೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪೋಲೀಸರ ಈ ಕೃತ್ಯಕ್ಕೆ ಗರಂ ಆಗಿದ್ದು ತಕ್ಷಣ ಧಾರವಾಡ ವಿದ್ಯಾಗಿರಿ ಪೋಲೀಸ ಠಾಣೆಯ ಇನಸ್ಪೆಕ್ಟರ್ ಹಾಗೂ ಇನ್ನೂ ಆ ಪ್ರಕರಣದಲ್ಲಿ ಭಾಗಿಯಾದವರನ್ನು ಕೂಡಲೇ ಅಮಾನತ್ತು ಮಾಡುವಂತೆ ಒತ್ತಾಯಿಸಿದ್ದಾರೆ.

ಅಲ್ಲದೇ ವಿಧಾನಸಭೆಯ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಗಾಂಜಾ ಮುಕ್ತ ನಗರಕ್ಕೆ ಪೋಲೀಸ ಇಲಾಖೆ ಮುಂದಾಗಿರುವುದು ಒಳ್ಳೆಯ ಕೆಲಸ..ಆದರೆ ಇದರ ಹೆಸರಿನಲ್ಲಿ ಅಮಾಯಕ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಹಣ ಕೇಳಿ ದೌರ್ಜನ್ಯ ಎಸಗುವ ಕ್ರಮ ಖಂಡನೀಯ.ಎಪ್ರೀಲ್ 25 ರಂದು ಗಾಂಜಾ ಸೇವನೆ ಹೆಸರಿನಲ್ಲಿ ವಶಕ್ಕೆ ಪಡೆದ ಯುವಕರಲ್ಲಿ ಆದಿತ್ಯಾ ಸಹ ಒಬ್ಬನಾಗಿದ್ದಾನೆ.ಆತ ಗಾಂಜಾ ಸೇವನೆ ಮಾಡಿಲ್ಲಾ ಎಂಬುದು ವೈದ್ಯಕೀಯ ಪರೀಕ್ಷೆಯ ವರದಿಯಿಂದ ಸಾಬೀತಾಗಿದೆ.

ಆದರೂ ಪೋಲೀಸರು ಆತನನ್ನು ಬಿಡುಗಡೆ ಮಾಡಲು ಹತ್ತು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿರುವುದು ಹೇಯ ಕೃತ್ಯ.ಆತ ನಾನು ಬಡವ ಅಂತಾ ಹೇಳಿದ್ದಕ್ಕೆ ಎರಡು ಸಾವಿರ ಕೊಟ್ಟರೆ ಬಿಡುವುದಾಗಿ ಹೇಳಿದ್ದಾರೆ.ತನ್ನ ಭವಿಷ್ಯದ ಜೀವನದ ಬಗ್ಗೆ ಯೋಚಿಸಿ ಹಣ ನೀಡಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ಪೋಲೀಸರು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ವಿದ್ಯಾರ್ಥಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾನೆ.ಹಾಗೂ ಪೋಲೀಸರ ಒತ್ತಡಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇದು ಕೇವಲ ಆತ್ಮಹತ್ಯೆ ಅಲ್ಲಾ ಅಂತಾ ಅರವಿಂದ ಬೆಲ್ಲದ ಹೇಳುವ ಜೊತೆಗೆ

ರಕ್ಷಕರೇ ಭಕ್ಷಕರಾಗಿ ಅಮಾಯಕರ ಪ್ರಾಣದ ಜೊತೆ ಚೆಲ್ಲಾಟವಾಡತಿದ್ದಾರೆ.ಕೂಡಲೇ ಘಟನೆಯಲ್ಲಿ ಭಾಗಿಯಾದ ಪೋಲೀಸ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಅವರ ಮೇಲೆ ಕೊಲೆ ಪ್ರಚೋದನೆ ಕೇಸ್ ದಾಖಲಿಸಿ ಮೃತ ಕುಟುಂಬಕ್ಕೆ ಪರಿಹಾರ ಘೋಷಿಸಿಬೇಕು ಎಂದು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಈ ವಿದ್ಯಾರ್ಥಿ ಸುಸೈಡ್ ಕೇಸ್ ನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಹಾಗೂ ಪೋಲೀಸರಿಂದ ಪ್ರಾಣ ಕಳೆದುಕೊಂಡ ಯುವಕನ ಕುಟಂಬಕ್ಕೆ ಪರಿಹಾರ ಕೊಡಬೇಕು ಎಂದು ಬಿಜೆಪಿ..ಎಬಿವಿಪಿ…ಸಮಾನ ಮನಸ್ಕರ ವೇದಿಕೆ ಬೆನ್ನು ಬಿದ್ದಿದೆ..ಈ ಪ್ರಕರಣವನ್ನು ಖಡಕ್ ಕಮೀಷನರ್ ಯಾವ ರೀತಿ ತನಿಖೆ ಮಾಡತಾರೆ ಕಾದು ನೋಡಬೇಕಾಗಿದೆ.

ಉದಯ ವಾರ್ತೆ
ಧಾರವಾಡ.


Share to all

You May Also Like

More From Author